ʼಬಾಬಾ ಕಾ ಡಾಬಾʼ ಬಳಿಕ ಇದೀಗ ಮತ್ತೊಬ್ಬ ಬಡ ವ್ಯಾಪಾರಿಯ ನೆರವಿಗೆ ನೆಟ್ಟಿಗರು ರೆಡಿ 08-01-2021 2:58PM IST / No Comments / Posted In: Latest News, India ಬಾಬಾ ಕಾ ಡಾಬಾ ಘಟನೆ ಬಳಿಕ ಸಮಾಜದಲ್ಲಿ ಇನ್ನೂ ಮಾನವೀಯತೆ ನೆಲೆಸಿದೆ ಎಂಬ ವಿಚಾರವನ್ನ ಸಾಬೀತು ಮಾಡಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಶಕ್ತಿ ಏನೆಂಬುದನ್ನ ತೋರಿಸಿಕೊಟ್ಟಿತ್ತು. ದೆಹಲಿಯ ಬಡ ದಂಪತಿ ತಮ್ಮ ಢಾಬಾದಲ್ಲಿ ವ್ಯಾಪಾರವಾಗುತ್ತಿಲ್ಲವೆಂದು ಕಣ್ಣೀರು ಹಾಕಿದ್ದೇ ತಡ ಮಾರನೇ ದಿನದಿಂದಲೇ ಜನಸಂದಣಿ ನೆರೆದಿತ್ತು. ಇದೇ ರೀತಿಯ ಇನ್ನೊಂದು ಘಟನೆ ಇದೀಗ ನೊಯ್ಡಾದಿಂದ ವರದಿಯಾಗಿದೆ. ಹೂ ಕುಂಡಗಳನ್ನ ಮಾರಾಟ ಮಾಡುವ ಪ್ರೇಮ್ ಸಿಂಗ್ ಎಂಬ ಬೀದಿ ಬದಿಯ ವ್ಯಾಪಾರಿಗೆ ಸ್ಥಳೀಯರು ನೆರವಾಗಿದ್ದಾರೆ. ಪ್ರೇಮ್ ಸಿಂಗ್ಗೆ ಸಹಾಯ ಮಾಡಬೇಕೆಂಬ ಉದ್ದೇಶ ಹೊತ್ತ ಪತ್ರಕರ್ತ ತವ್ಲೀನ್ ಸಿಂಗ್ ಅರೂರ್ ಎಂಬವರು ಪ್ರೇಮ್ ಸಿಂಗ್ರ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲಗತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳು ಬಡ ವ್ಯಾಪಾರಿಗೆ ಸಹಾಯ ಹಸ್ತ ಚಾಚಿದ್ದಾರೆ. Prem Singh is a potter selling his wares at the sector-27 main road, Noida. He blessed me with tears today after I bought some items. I was his first customer in weeks he says. He has nice stuff! Do your thing Noida Twitter! Location: https://t.co/W1yrtmvLPA pic.twitter.com/QE9EdK1um2 — Tavleen Singh Aroor (@Tavysingh) January 6, 2021 https://twitter.com/V_Abhyudaya/status/1346826207082385408