ಖಾಸಗಿ ವಲಯದ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಉಳಿತಾಯ ಖಾತೆಗಳಲ್ಲಿ 1 ಲಕ್ಷ ರೂಪಾಯಿಗಳ ಠೇವಣಿಗಳಿಗೆ ಶೇಕಡಾ 7 ರಷ್ಟು ಬಡ್ಡಿ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ ಪ್ರತಿಸ್ಪರ್ಧಿ ಬ್ಯಾಂಕ್ ಗಳಿಗೆ ಕಠಿಣ ಸ್ಪರ್ಧೆಯೊಡ್ಡಿದೆ.
ಜನವರಿ 1ರಿಂದ ಬ್ಯಾಂಕ್ ಹೊಸ ಬಡ್ಡಿ ದರವನ್ನು ಜಾರಿಗೊಳಿಸಿದೆ. ಇದಕ್ಕೂ ಮೊದಲು ಬ್ಯಾಂಕ್ ಉಳಿತಾಯ ಖಾತೆಗಳಿಗೆ ಶೇಕಡಾ 6 ರಷ್ಟು ಬಡ್ಡಿಯನ್ನು ಪಾವತಿಸುತ್ತಿತ್ತು. ಬಹುತೇಕ ಬ್ಯಾಂಕುಗಳು ಉಳಿತಾಯ ಖಾತೆಗಳಿಗೆ ಶೇಕಡಾ 3 ರಿಂದ 4 ರಷ್ಟು ಬಡ್ಡಿಯನ್ನು ನೀಡುತ್ತವೆ.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ಲಕ್ಷ ರೂಪಾಯಿಗಳ ಠೇವಣಿಗೆ ಕೇವಲ ಶೇಕಡಾ 2.70 ರಷ್ಟು ಬಡ್ಡಿ ನೀಡುತ್ತದೆ. ಖಾಸಗಿ ವಲಯದ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವು ಶೇಕಡಾ 3 ರಿಂದ 3.5 ರಷ್ಟಿದೆ.
2020 ರ ಡಿಸೆಂಬರ್ನಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕಿನ ಸಾಲ ವಿತರಣೆಯು ಶೇಕಡಾ 0.7 ರಷ್ಟು ಏರಿಕೆಯಾಗಿ 1,10,499 ಕೋಟಿ ರೂಪಾಯಿಯಾಗಿತ್ತು. 2019 ರ ಡಿಸೆಂಬರ್ನಲ್ಲಿ ಬ್ಯಾಂಕಿನ ಸಾಲ 1,09,698 ಕೋಟಿ ರೂಪಾಯಿಯಾಗಿತ್ತು.