ಉತ್ತರ ಪ್ರದೇಶದ ಬದೌನ್ ಜಿಲ್ಲೆ ಉಘೈತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನಿರ್ಭಯಾ ಮಾದರಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ(ಎನ್.ಸಿ.ಡಬ್ಲ್ಯೂ.) ಸದಸ್ಯೆ ಚಂದ್ರಮುಖಿ ದೇವಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಸಂಜೆ ಬಳಿಕ ಮಹಿಳೆಯರು ಹೊರಹೋಗಲು ಯೋಚಿಸಬೇಕು. ಹೊರಗೆ ಹೋಗಲು ಜೊತೆಗೆ ಯಾರನ್ನಾದರೂ ಕರೆದೊಯ್ಯಬೇಕು ಎಂದು ತಿಳಿಸಿದ್ದಾರೆ. ಗ್ಯಾಂಗ್ರೇಪ್ ಮತ್ತು ಕೊಲೆಯಾದ ಅಂಗನವಾಡಿ ಕಾರ್ಯಕರ್ತೆ ಕುಟುಂಬಸ್ಥರನ್ನು ಭೇಟಿಯಾಗಿದ್ದ ಅವರು, ಭೇಟಿಯ ಬಳಿಕ ಈ ರೀತಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಯಾರಾದರೂ ಜೊತೆಗಿದ್ದರೆ ಇಂತಹ ಕೃತ್ಯ ತಪ್ಪಿಸಬಹುದಿತ್ತು. ಸಂಜೆ ಬಳಿಕ ಮಹಿಳೆಯರು ಹೊರಹೋಗಲು ಯೋಚಿಸಬೇಕು. ಹೊರಗೆ ಹೋಗಲು ಜೊತೆಗೆ ಯಾರನ್ನಾದರೂ ಕರೆದೊಯ್ಯಬೇಕು. ಈ ಮಹಿಳೆ ಸಂಜೆ ಹೊರ ಹೋಗಬಾರದಿತ್ತು ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ತೃಪ್ತಿ ಇಲ್ಲವೆಂದು ಚಂದ್ರಮುಖಿ ದೇವಿ ಆರೋಪಿಸಿದ್ದಾರೆ. ಪೊಲೀಸರು ತಕ್ಷಣಕ್ಕೆ ಸ್ಪಂದಿಸಿದ್ದರೆ ಸಂತ್ರಸ್ತೆಯನ್ನು ಉಳಿಸಬಹುದಿತ್ತು. ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯನ್ನು ಸರಿಯಾದ ಸಮಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರೆ ಜೀವ ಉಳಿಸಬಹುದಿತ್ತು. ಪೊಲೀಸರು ತಡವಾಗಿ ಕ್ರಮಕೈಗೊಂಡರು. ಎಫ್ಐಆರ್ ತಡವಾಗಿ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ಕೂಡ ತಡ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಘಟನೆ ಅತ್ಯಂತ ದುರದೃಷ್ಟಕರ ಎಂದು ಹೇಳಲಾಗಿದೆ ಎಂದು ಚಂದ್ರಮುಖಿ ದೇವಿ ಹೇಳಿದ್ದಾರೆ.