ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ.
ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಚಮಚ ತುಪ್ಪ ಹಾಕಿ ನಂತರ ಅದಕ್ಕೆ ¼ ಟೀ ಸ್ಪೂನ್ ಜೀರಿಗೆ, 8 ಕಾಳು ಕಾಳುಮೆಣಸು ಹಾಕಿ. ನಂತರ ಅದಕ್ಕೆ 1 ಟೊಮೆಟೊ ಹಾಗೂ 1 ಈರುಳ್ಳಿಯನ್ನು ಕತ್ತರಿಸಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಟೊಮೆಟೊ ತುಸು ಮೆತ್ತಗಾದ ಮೇಲೆ ಅದಕ್ಕೆ 1 ಕ್ಯಾರೆಟ್, 10 ಬೀನ್ಸ್, 1 ಕ್ಯಾಪ್ಸಿಕಂ ಅನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ತುಸು ಫ್ರೈ ಮಾಡಿ. ನಂತರ ಇದಕ್ಕೆ ¼ ಟೀ ಸ್ಪೂನ್ ಅರಿಶಿನ, 1 ಚಮಚ ಧನಿಯಾ ಪುಡಿ, ½ ಚಮಚ ಗರಂ ಮಸಾಲ, 1 ಚಮಚ ಅಚ್ಚ ಖಾರದ ಪುಡಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ¾ ಕಪ್ ಹೆಸರು ಬೇಳೆ, ¼ ಕಪ್ ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ 2 ಕಪ್ ನೀರು ಹಾಕಿ 2 ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಕಿಚಡಿ ಸವಿಯಲು ಸಿದ್ಧ.