alex Certify ಜಾಲತಾಣದಲ್ಲಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ ಗ್ಯಾಂಗ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣದಲ್ಲಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ ಗ್ಯಾಂಗ್ ಅರೆಸ್ಟ್

ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ಸಂಕಲನಗೊಳಿಸಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ 6 ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಭರತ್ ಪುರದ ವಾರೀಸ್, ರಾಯೀಸ್, ಅನ್ನೆ ಖಾನ್, ವಾಹಿದ್, ಮಫೀದ್, ಅಕ್ರಮ್ ಬಂಧಿತರು. ಎಲ್ಲ 30 ವರ್ಷ ವಯಸ್ಸಿನ ಒಳಗಿನವರಾಗಿದ್ದು, ಒಂದೇ ಗ್ರಾಮದ ಇವರೆಲ್ಲರೂ ಗುಂಪುಗೂಡಿ ಈ ಕೃತ್ಯ ಎಸಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಸ್ನೇಹ ಬೆಳೆಸುವ ಈ ಗ್ಯಾಂಗ್, ಅವರೊಂದಿಗೆ ಚಾಟಿಂಗ್ ಮಾಡುತ್ತಾರೆ. ನಂತರ ವೀಡಿಯೋ ಕಾಲ್ ಮಾಡುತ್ತಾರೆ. ಮಿಕ ಬಲೆಗೆ ಬೀಳುತ್ತಿದ್ದಂತೆಯೇ ಅವರನ್ನು ಅನ್ ಫ್ರೆಂಡ್ ಮಾಡಿಬಿಡುತ್ತಾರೆ.

ಬಳಿಕ ಅವರ ಪೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ಸಂಕಲನ ಮಾಡಿ, ಬೆದರಿಕೆಯೊಡ್ಡಿ ಹಣ ಪೀಕಲಾರಂಭಿಸುತ್ತಾರೆ. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...