ಬೇರೊಬ್ಬ ತಾಯಿಯಿಂದ ನನಗೆ ಸಿಕ್ಕ ಸಹೋದರ ಆತ. ಇದು ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತು ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಕೇಳಿದ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಕೊಟ್ಟ ಭಾವನಾತ್ಮಕ ಉತ್ತರ.
ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರ ಸಂವಾದ ನಡೆಸಿದ ದಿನೇಶ್ ಕಾರ್ತಿಕ್ ಮುಂದೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗರೆದರು. ಎಲ್ಲಕ್ಕೂ ಉತ್ತರಿಸಿದ ದಿನೇಶ್, ಪಾಂಡ್ಯ ಬಗೆಗಿನ ಪ್ರಶ್ನೆಯೊಂದಕ್ಕೆ ಮಾತ್ರ ಭಾವನಾತ್ಮಕವಾಗಿ ಉತ್ತರಿಸಿದ್ದಾರೆ.
ಹಾರ್ದಿಕ್ ಪಾಂಡ್ಯರನ್ನು ಒಂದು ಶಬ್ದದಲ್ಲಿ ವಿಶ್ಲೇಷಿಸಿ ಎಂಬ ಅಭಿಮಾನಿಯ ಪ್ರಶ್ನೆಗೆ, ಒಂದು ಶಬ್ದವೇಕೆ ? ಒಂದು ಸಾಲೇ ಕೊಡುತ್ತೇನೆ. ತಾಯಿಯಿಂದ ಸಿಕ್ಕ ಸಹೋದರ (ಬ್ರದರ್ ಫ್ರಮ್ ಅನದರ್ ಮದರ್) ಎಂದು ಉತ್ತರಿಸಿ, ಜೊತೆಗೊಂದು ಹೃದಯದ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.
ಇದನ್ನು ಕಂಡ ಹಾರ್ದಿಕ್ ಪಾಂಡ್ಯ, ನೀನು ನನ್ನನ್ನು ಅಳುವಂತೆ ಮಾಡಿಬಿಟ್ಟೆ ಎಂದು ಟ್ವೀಟ್ ಮಾಡಿದ್ದು, ಮೂರ್ನಾಲ್ಕು ಎಮೋಜಿಗಳನ್ನೂ ಪೋಸ್ಟ್ ಮಾಡಿದ್ದಾರೆ. ಇಬ್ಬರ ನಡುವಿನ ಈ ಟ್ವೀಟ್ ಸಂಭಾಷಣೆ ವೈರಲ್ ಆಗಿದೆ.