ಭಾರತದಲ್ಲಿ ವಾಟ್ಸಾಪ್ ಬಳಕೆದಾರರಗಿಗೇನು ಬರವಿಲ್ಲ. ಫೇಸ್ಬುಕ್ ಒಡೆತನದ ಈ ಮೆಸೆಜಿಂಗ್ ಅಪ್ಲಿಕೇಶನ್ ಇದೀಗ ತನ್ನ ನಿಯಮಾವಳಿಗಳಲ್ಲಿ ಕೆಲ ಬದಲಾವಣೆಗಳನ್ನ ಮಾಡಿಕೊಡಿದೆ.
ಇದರನ್ವಯ ನೀವು ಫೆಬ್ರವರಿ 8ರ ಬಳಿಕವೂ ವಾಟ್ಸಾಪ್ ಬಳಕೆ ಮಾಡುವ ಇರಾದೆ ಹೊಂದಿದ್ದರೆ ವಾಟ್ಸಾಪ್ನ ಎಲ್ಲಾ ಷರತ್ತುಗಳನ್ನ ನೀವು ವಿಧಿ ಇಲ್ಲದೇ ಒಪ್ಪಲೇಬೇಕಿದೆ.
ಮಂಗಳವಾರ ಗ್ರಾಹಕರ ವಾಟ್ಸಾಪ್ ಸ್ಕ್ರೀನ್ ಮೇಲೆ ಹೊಸ ನೋಟಿಸ್ ಒಂದು ಬಿತ್ತರವಾಗಿದ್ದು ಇದರಲ್ಲಿ ನಮ್ಮ ಮಾಹಿತಿಯನ್ನ ಹಂಚಿಕೊಳ್ಳುವ ಬಗ್ಗೆ ಅನುಮತಿಯನ್ನ ಕೇಳಲಾಗಿದೆ. ಇದಕ್ಕೆ ಒಪ್ಪಿಕೊಳ್ಳೋದು ಬಿಡೋದು ಗ್ರಾಹಕರಿಗೆ ಬಿಟ್ಟ ವಿಚಾರ. ಒಪ್ಪಿಕೊಂಡಲ್ಲಿ ನಿಮಗೆ ಯಾವುದೇ ಅಡೆ ತಡೆ ಇಲ್ಲದೇ ವಾಟ್ಸಾಪ್ ಸೇವೆ ಸಿಗುತ್ತೆ. ಒಂದು ವೇಳೆ ನಿಮ್ಮ ಮಾಹಿತಿಯನ್ನ ಶೇರ್ ಮಾಡಲು ನಿಮಗೆ ಇಷ್ಟವಿಲ್ಲವಾದಲ್ಲಿ ಫೆಬ್ರವರಿ 9ರ ಬಳಿಕ ನಿಮಗೆ ವಾಟ್ಸಾಪ್ ಸೇವೆ ಸಿಗೋದಿಲ್ಲ.
ಮೊದಲೆಲ್ಲ ವಾಟ್ಸಾಪ್ ಅಪ್ಡೇಟ್ ಮೂಲಕ ಹೆಚ್ಚಿನ ಸೌಕರ್ಯ ನೀಡುತ್ತಿದ್ದ ವಾಟ್ಸಾಪ್ ಇದೇ ಮೊದಲ ಬಾರಿಗೆ ಈ ರೀತಿ ಸ್ಕ್ರೀನ್ ಮೇಲೆ ನೋಟಿಸ್ ಪ್ರದರ್ಶಿಸಿದೆ. ಈ ಷರತ್ತಿಗೆ ಒಪ್ಪಿಗೆ ನೀಡಿದ ಬಳಕೆದಾರರ ಸ್ಥಳ, ವ್ಯವಹಾರ ಸೇರಿದಂತೆ ಅನೇಕ ವಿವರಗಳನ್ನ ವಾಟ್ಸಾಪ್, ಫೇಸ್ಬುಕ್ ಜೊತೆ ಇರುವ ಕಂಪನಿಗಳ ಜೊತೆ ಶೇರ್ ಮಾಡಲಿದೆ.