alex Certify ಮನೆಗೆ ಲೇಟಾಗಿ ಬಂದ ಪತಿ ಮುಖಕ್ಕೆ ಕಾದ ಎಣ್ಣೆ ಸುರಿದ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಲೇಟಾಗಿ ಬಂದ ಪತಿ ಮುಖಕ್ಕೆ ಕಾದ ಎಣ್ಣೆ ಸುರಿದ ಪತ್ನಿ..!

ಪತಿ ಪ್ರತಿದಿನ ಮನೆಗೆ ಲೇಟಾಗಿ ಬರ್ತಾನೆ ಎಂಬ ವಿಚಾರದಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಮಹಿಳೆ ಪತಿ ಮಲಗಿದ್ದ ವೇಳೆ ಆತನ ಮುಖಕ್ಕೆ ಬಿಸಿ ಎಣ್ಣೆಯನ್ನ ಹಾಕಿದ ಘಟನೆ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಸಂಬಂಧ 35 ವರ್ಷದ ಶಿವಕುಮಾರಿ ಅಹಿರ್​ವರ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಅರವಿಂದ್​ ಹಾಗೂ ಶಿವಕುಮಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 38 ವರ್ಷದ ಅರವಿಂದ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆಯಿಂದಾಗಿ ಅರವಿಂದ್​ ಮುಖ ಸುಟ್ಟು ಹೋಗಿದ್ದು ಬುಂದೇರ್​ಖಂಡ್​​ ಮೆಡಿಕಲ್​ ಕಾಲೇಜಿಗೆ ದಾಖಲು ಮಾಡಲಾಗಿದೆ.

ಅರವಿಂದ್​ ಹಾಗೂ ಶಿವಕುಮಾರಿ ಈ ವಿಚಾರವಾಗಿ ರಾತ್ರಿ ಜಗಳ ಮಾಡಿಕೊಂಡಿದ್ದರು ಅಂತಾ ಅರವಿಂದ್​ ಸಹೋದರ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ಇವರಿಬ್ಬರು ಜಗಳವಾಡುತ್ತಿದ್ದ ವೇಳೆ ಪೋಷಕರು ಮಧ್ಯಪ್ರವೇಶಿಸಿದ ಕಾರಣ ಜಗಳ ಮುಂದಕ್ಕೆ ಹೋಗಿರಲಿಲ್ಲ. ಆದರೆ ಕೋಪದಲ್ಲೇ ಇದ್ದ ಶಿವಕುಮಾರಿ ಮುಂಜಾನೆ 5ರ ಸುಮಾರಿಗೆ ಆತ ನಿದ್ದೆ ಮಾಡುತ್ತಿದ್ದ ವೇಳೆ ಕಾದ ಎಣ್ಣೆಯನ್ನ ಮುಖಕ್ಕೆ ಸುರಿದಿದ್ದಾಳೆ. ಜೋರಾದ ಶಬ್ದ ಕೇಳಿದ ಪೋಷಕರು ಕೂಡಲೇ ಕೋಣೆಗೆ ಆಗಮಿಸಿ ನೆರೆಹೊರೆಯವರ ಸಹಾಯದಿಂದ ಅರವಿಂದನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...