
ಮದುವೆ ಸಮಾರಂಭಗಳಲ್ಲಿ ಉಡುಗೊರೆ ನೀಡುವುದು ಸಾಮಾನ್ಯ ಸಂಗತಿ. ಸ್ನೇಹಿತರು, ಸಂಬಂಧಿಕರು ವಧು-ವರರಿಗೆ ಉಡುಗೊರೆ ನೀಡಿ ಶುಭ ಹಾರೈಸುತ್ತಾರೆ. ಆದ್ರೆ ಇದೇ ಉಡುಗೊರೆ ಮದುವೆ ಮುರಿಯಲು ಕಾರಣವಾಗಿದೆ.
ಘಟನೆ ನಡೆದಿರೋದು ಕೆನಡಾದಲ್ಲಿ. ಅಲ್ಲಿನ ನಿವಾಸಿ ಸುಸಾನ್ ಮದುವೆ ರದ್ದು ಮಾಡಿದ್ದಾಳೆ. ಸುಸಾನ್ ಸೋದರ ಸಂಬಂಧಿ ಆಕೆ ಮದುವೆ ಮುರಿದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾನೆ. ಸಂಬಂಧಿಕರಿಗೆ ಉಡುಗೊರೆ ರೂಪದಲ್ಲಿ ನಗದು ನೀಡುವಂತೆ ಸುಸಾನ್ ಹೇಳಿದ್ದಳು. ಇದೇ ಹಣದಲ್ಲಿ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದಳು. ಆದ್ರೆ ಸಂಬಂಧಿಕರು ಆಕೆ ಆಸೆಗೆ ತಣ್ಣೀರೆರಚಿದ್ದಾರೆ. ಹಾಗಾಗಿ ಸುಸಾನ್ ಮದುವೆ ರದ್ದಾಗಿದೆ.
ಬಾಲ್ಯದಲ್ಲಿಯೇ ಸುಸಾನ್ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಆಕೆಗೆ 14 ವರ್ಷದಲ್ಲಿರುವಾಗ ನಿಶ್ಚಿತಾರ್ಥವಾಗಿತ್ತಂತೆ. ಸುಸಾನ್ ಗೆ 20 ವರ್ಷವಾದಾಗ ಮಗುವಿಗೆ ಜನ್ಮ ನೀಡಿದ್ದಳಂತೆ. ಆದ್ರೆ ಮದುವೆಯಾಗಲು ಹಣವಿರಲಿಲ್ಲವಂತೆ. 15 ಸಾವಿರ ಡಾಲರ್ ಹಣ ನಮ್ಮ ಬಳಿಯಿತ್ತು. ನಮಗೆ 60 ಸಾವಿರ ಡಾಲರ್ ಅವಶ್ಯಕತೆಯಿತ್ತು. ಇದೇ ಕಾರಣಕ್ಕೆ ಉಡುಗೊರೆ ರೂಪದಲ್ಲಿ ಹಣ ಕೇಳಿದ್ದೆ. ಆದ್ರೆ ಸಂಬಂಧಿಕರು ನೀಡಲಿಲ್ಲ. ಹಾಗಾಗಿ ಮದುವೆ ರದ್ದಾಯ್ತು ಎಂದು ಸುಸಾನ್ ಹೇಳಿದ್ದಾಳೆ.