ಹೊಸ ವರ್ಷದ ದಿನ ಖುಷಿಯಿಂದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಕೆ ಮಾರನೇ ದಿನ ಹೆಣವಾಗಿ ಪ್ರತ್ಯಕ್ಷಳಾಗಿದ್ದಾಳೆ. ಈ ಘಟನೆ ನಡೆದಿರೋದು ಫಿಲಿಪೈನ್ಸ್ ನಲ್ಲಿ. ಕ್ರಿಸ್ಟಿನ್ ಏಂಜೆಲಿಕಾ ಡಾಸೆರಾ ಎಂಬ ಗಗನಸಖಿ ಮೃತ ದುರ್ದೈವಿ. ಈಕೆಯ ಸಾವಿನ ಸುತ್ತ ಅನುಮಾದ ಹುತ್ತ ಬೆಳೆದಿದೆ. ಈಕೆಯದ್ದು ಸಾಮಾನ್ಯ ಸಾವಲ್ಲ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು, ಹೊಸ ವರ್ಷದ ಹಿಂದಿನ ದಿನ ಫಿಲಿಪೈನ್ಸ್ ನ ಮಕಾತಿಯ ಫೋರ್ ಸ್ಟಾರ್ ಹೋಟೆಲ್ ನಲ್ಲಿ ಸ್ನೇಹಿತರೊಟ್ಟಿಗೆ ಪಾರ್ಟಿ ಮಾಡಿದ್ದಾಳೆ ಈಕೆ. ನಂತರ ರಾತ್ರಿ ಮಲಗಿದ್ದ ಈಕೆ ಬೆಳಗ್ಗೆ ಹೆಣವಾಗಿ ಸಿಕ್ಕಿದ್ದಾಳೆ. ಈತನ ಸಹದ್ಯೋಗಿ ಈಕೆ ಬಾತ್ ಟಬ್ ನಲ್ಲಿ ಶವವಾಗಿ ಬಿದ್ದಿರುವುದನ್ನು ಗಮನಿಸಿ ವಿಚಾರವನ್ನು ಹೋಟೆಲ್ ಸಿಬ್ಬಂದಿಗೆ ಹೇಳಿದ್ದಾನೆ.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಆಕೆ ಮೃತಪಟ್ಟಿರೋದನ್ನು ಧೃಡಪಡಿಸಿದ್ದಾರೆ. ಇನ್ನು ಆಕೆಯ ಮೈ ಮೇಲೆ ಗಾಯಗಳಾಗಿದ್ದು, ಅತ್ಯಾಚಾರವಾಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಈ ಸಂಭಂದ 11 ಜನರ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.