2021ಕ್ಕೆ ಕಾಲಿಡುತ್ತಿದ್ದಂತೆಯೇ ಈ ವರ್ಷದಲ್ಲಿ ನಮ್ಮ ಹಣವನ್ನು ಸ್ಮಾರ್ಟ್ ಆಗಿ ಹೂಡಿಕೆ ಮಾಡಬೇಕೆಂದು ನಾವೆಲ್ಲಾ ಅಂದುಕೊಳ್ಳುವುದು ಸಹಜ.
ಸುದೀರ್ಘ ಕಾಲದ ಹೂಡಿಕೆಗಳ ಮೇಲೆ ನಂಬಿಕೆ ಉಳ್ಳವರು ಸರ್ಕಾರೀ ಪ್ರಾಯೋಜಿತ ಯೋಜನೆಗಳ ಮೇಲೆ ದುಡ್ಡು ಹಾಕುತ್ತಾರೆ. ಇವುಗಳ ಪೈಕಿ ಜನಪ್ರಿಯವಾದ ಒಂದು ಹೂಡಿಕೆ ಎಂದರೆ ಅಂಚೆ ಕಚೇರಿಯ ಉಳಿತಾಯ ಯೊಜನೆಗಳು. ಇತ್ತೀಚೆಗೆ ಈ ಸ್ಕೀಂಗಳು ಸಾಮಾನ್ಯ ಬ್ಯಾಂಕ್‌ಗಳ ಎಫ್‌ಡಿಗಿಂತ ಉತ್ತಮವಾದ ಬಡ್ಡಿ ಕೊಡುತ್ತವೆ.
ಏಪ್ರಿಲ್ 2020ರಿಂದ ಕಿಸಾನ್ ವಿಕಾಸ್ ಪತ್ರಗಳ ಮೇಲೆ ಮಾಡುವ ಹೂಡಿಕೆಯ ಮೇಲೆ ವಾರ್ಷಿಕ ಶೇ.6.9 ರ ಬಡ್ಡಿದರವನ್ನು ಕೊಡಲಾಗುತ್ತಿದೆ. ವಿಕಾಸ್ ಪತ್ರದ ಮೇಲೆ ಹೂಡಲಾಗುವ ಮೊತ್ತವು 10 ವರ್ಷದ ನಾಲ್ಕು ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಲಿದೆ.
ಕನಿಷ್ಠ 1000 ರೂ.ಗಳಿಂದ ಆರಂಭವಾಗುವ ವಿಕಾಸ್ ಪತ್ರದ ಹೂಡಿಕೆ ಆಯ್ಕೆಗಳಿಗೆ ಗರಿಷ್ಠ ಮಿತಿ ನಿಗದಿ ಪಡಿಸಿಲ್ಲ.
ಕೆಳಕಂಡ ಮಾರ್ಗಗಳ ಮೂಲಕ ಕಿಸಾನ್ ವಿಕಾಸ್ ಪತ್ರವನ್ನು ಖರೀದಿ ಮಾಡಬಹುದು:
1. ಏಕ ವಯಸ್ಕ
2. ಜಂಟಿ ಎ ಖಾತೆ (ಗರಿಷ್ಠ ಮೂವರು ವಯಸ್ಕರು)
3. ಜಂಟಿ ಬಿ ಖಾತೆ (ಗರಿಷ್ಠ ಮೂವರು ವಯಸ್ಕರು)
4. ಹತ್ತು ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರು
5. ಅಪ್ರಾಪ್ತ ವಯಸ್ಸಿನವರೊಂದಿಗೆ ಒಬ್ಬ ವಯಸ್ಕರು
6. ಮಾನಸಿಕ ಅಸ್ವಸ್ಥರಾದವರ ಪರವಾಗಿ ಒಬ್ಬ ವಯಸ್ಕರು
ಕಿಸಾನ್ ವಿಕಾಸ್ ಪತ್ರವನ್ನು ಪಾಸ್‌ಬುಕ್ ರೂಪದಲ್ಲಿ ಬಳಸಬಹುದಾಗಿದೆ. ಇದನ್ನು ಅಂಚೆ ಕಚೇರಿಯ ಇಲಾಖಾ ಶಾಖೆಯಿಂದ ಖರೀದಿಸಬಹುದಾಗಿದೆ. ಈ ಪ್ರಮಾಣಪತ್ರ ಪಡೆದ 2ರಿಂದ ಎರಡೂವರೆ ವರ್ಷಗಳ ಅವಧಿಯೊಳಗೆ ಹಣ ಹಿಂಪಡೆಯಬಹುದಾಗಿದೆ.