alex Certify ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ದುಡುಕಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ದುಡುಕಿದ ಪತ್ನಿ

ಬೆಂಗಳೂರು: ಪತಿರಾಯ ಮನೆಯಲ್ಲಿ ಗೆಳತಿಯೊಂದಿಗೆ ಹೊಸವರ್ಷದ ಪಾರ್ಟಿ ಮಾಡುತ್ತಿರುವುದನ್ನು ನೋಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ.

30 ವರ್ಷದ ಅಭಿಲಾಷಾ ತ್ರಿವೇಣಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ರಾಮನಗರದ ಅಭಿಲಾಷಾ ಮತ್ತು ಶಶಿಕುಮಾರ್ ದಂಪತಿ ಶ್ರೀರಾಮಪುರದಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಶಶಿಕುಮಾರ್ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಅಭಿಲಾಷಾ ಗಲಾಟೆ ಮಾಡುತ್ತಿದ್ದರು.

ಪ್ರತಿದಿನ ರಾತ್ರಿ 10 ಗಂಟೆಗೆ ಶಶಿಕುಮಾರ್ ಗೆ ಯುವತಿ ಕರೆ ಮಾಡುತ್ತಿದ್ದಳು. ಆತ ಪ್ರತಿದಿನವೂ ಸುಳ್ಳು ಹೇಳಿ ಮನೆಯಿಂದ ಹೊರಗೆ ಹೋಗುತ್ತಿದ್ದ. ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ಯುವತಿಯೊಂದಿಗೆ ಮಾತನಾಡುವಾಗಲೇ ಪತ್ನಿಗೆ ಸಿಕ್ಕಿಬಿದ್ದಿದ್ದ. ಅಲ್ಲದೇ, ಹೊಸ ವರ್ಷದ ದಿನ ಮನೆಯಲ್ಲಿ ಯುವತಿಯೊಂದಿಗೆ ಪಾರ್ಟಿ ಮಾಡಿದ್ದ. ಇದನ್ನು ನೋಡಿದ ಅಭಿಲಾಷಾ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...