ಸೌದಿ ಅರೇಬಿಯಾದಲ್ಲಿ ತನ್ನನ್ನು ಉದ್ಯೋಗದಾತ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆಂದು ಆರೋಪಿಸಿ ಭಾರತಕ್ಕೆ ಹಿಂದಿರುಗಲು ಹೊರಟಿದ್ದ 40 ವರ್ಷದ ಮಹಿಳೆಗೆ ಕೊರೊನಾ ಪರೀಕ್ಷೆ ನಡೆಸಲು ಹಣ ಪಾವತಿಸಲು ಸಾಧ್ಯವಾಗದ ಕಾರಣ ತನಗೆ ವಿಮಾನ ಹತ್ತಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಧ್ಯಪ್ರದೇಶದ ಹರ್ಡಾ ಜಿಲ್ಲೆಯ ರೀನಾ ಗೆಹ್ಲೋಟ್ ನವೆಂಬರ್ನಲ್ಲಿ ವಿಡಿಯೋ ಸಂದೇಶದ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಇದಾದ ಬಳಿಕ ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿ ಮಹಿಳೆಯ ಸಹಾಯಕ್ಕೆ ಮುಂದಾಗಿತ್ತು.
2 ಆಡಿಯೋ ಸಂದೇಶಗಳಲ್ಲಿ ಸೌದಿ ಅರೇಬಿಯಾದ ನೇಮಕಾತಿ ಆಶ್ರಯಧಾಮದಲ್ಲಿ ನೆಲೆಸಿರುವ ಮಹಿಳೆ, ಕೊರೊನಾ ಟೆಸ್ಟ್ ನಡೆಸಲು 17 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ನನಗೆ ಅದನ್ನ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ನನಗೆ ಇನ್ನೂ ಒಂದು ತಿಂಗಳು ಕೆಲಸ ಮಾಡಲು ಹೇಳಿದ್ದಾರೆ ಎಂದು ನೋವನ್ನ ತೋಡಿಕೊಂಡಿದ್ದಾರೆ.