ವರ್ಕ್ ಫ್ರಂ ಹೋಮ್ ಆಯ್ಕೆ ದೊರೆತ ಬಳಿಕ ಮನೆ ಕೆಲಸದವರಿಗೂ ಬಾಯ್ ಹೇಳಿದ್ದಾಗಿದೆ. ಹಾಗಾಗಿ ಮನೆಯ ಎಲ್ಲಾ ಕೆಲಸಗಳು ಮನೆಯೊಡತಿಯ ಹೆಗಲ ಮೇಲೇ ಬಿದ್ದಿವೆ. ಹಾಗಾಗಿ ಬಾತ್ ರೂಮ್, ಟಾಯ್ಲೆಟ್ ಗಳಿಗೆ ವಾರಕ್ಕೊಮ್ಮೆ ಸ್ವಚ್ಛಗೊಳ್ಳುವ ಯೋಗ!
ಆದರೆ ನೆನಪಿಡಿ. ಬಾತ್ ರೂಮ್ ಹಾಗೂ ಟಾಯ್ಲೆಟ್ ಗಳೇ ಅತಿ ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾಗಳನ್ನು ಬಿಡುಗಡೆ ಮಾಡಿ ಮನೆ ತುಂಬಾ ಹಬ್ಬಿಸುತ್ತವೆ. ಹಾಗಾಗಿ ಅವುಗಳ ಸ್ವಚ್ಛತೆಯತ್ತ ಗಮನ ಕೊಡುವುದು ಬಹಳ ಮುಖ್ಯ.
ಹೀಗಾಗಿ ಪ್ರತಿಬಾರಿ ಟಾಯ್ಲೆಟ್ ಬಳಸಿದ ಬಳಿಕ ಕಮೋಡ್ ಸೀಟ್ ಸ್ವಚ್ಛಗೊಳಿಸಿ. ಟಾಯ್ಲೆಟ್ ಪೇಪರ್ ಗಳನ್ನು ಹತ್ತಿರದಲ್ಲೇ ಇಟ್ಟಿರಿ. ಒಬ್ಬರು ಟಾಯ್ಲೆಟ್ ಹೋಗಿ ಬಂದು ಕನಿಷ್ಠ 10 ನಿಮಿಷಗಳ ಬಳಿಕ ಇನ್ನೊಬ್ಬರು ಟಾಯ್ಲೆಟ್ ಗೆ ಹೋಗಿ.
ಹ್ಯಾಂಡ್ ವಾಶ್ ಬಳಸುವಾಗ ಅದನ್ನು ಕೈಯಿಂದ ಸ್ಪರ್ಶಿಸದೆ ಇರಲು ಪ್ರಯತ್ನಿಸಿ. ಬಾತ್ ರೂಮ್ ಹಿಡಿಗಳನ್ನೂ ಆಗಾಗ ಸ್ಯಾನಿಟೈಸ್ ಮಾಡುವುದು ಅಥವಾ ಸ್ವಚ್ಛೀಕರಿಸುವುದು ಬಹಳ ಮುಖ್ಯ.