alex Certify ಕೊರೊನಾ ಭೀತಿ ಹಿನ್ನೆಲೆ: ಬ್ರಿಟನ್ ಪ್ರಧಾನಿಯಿಂದ ಭಾರತ ಭೇಟಿ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಭೀತಿ ಹಿನ್ನೆಲೆ: ಬ್ರಿಟನ್ ಪ್ರಧಾನಿಯಿಂದ ಭಾರತ ಭೇಟಿ ರದ್ದು

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಗಣರಾಜ್ಯೋತ್ಸವ ದಿನದಂದು ಭಾರತ ಭೇಟಿಯನ್ನ ರದ್ದು ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಗೆ ಕರೆ ಮಾಡಿ ಮಾಹಿತಿ ತಿಳಿಸಿರುವ ಬೋರಿಸ್​ ಜಾನ್ಸನ್​ ಭಾರತಕ್ಕೆ ಭೇಟಿ ನೀಡಲಾಗದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಬ್ರಿಟನ್​ನಲ್ಲಿ ರೂಪಾಂತರಿ ಕೊರೊನಾ ವೈರಸ್​ ವ್ಯಾಪಿಸುತ್ತಿರುವ ಹಿನ್ನೆಲೆ ಬೋರಿಸ್​ ಜಾನ್ಸನ್​ ತಮ್ಮ ಭೇಟಿಯನ್ನ ರದ್ದು ಮಾಡಿದ್ದಾರೆ ಎಂದು ಹೇಳಲಾಗಿದೆ.

ಇಂದು ಬೆಳಗ್ಗೆ ಪ್ರಧಾನಿಗೆ ಕರೆ ಮಾಡಿದ ಬೋರಿಸ್​ ಜೋನ್ಸನ್​ ಈ ಬಾರಿ ಗಣರಾಜ್ಯೋತ್ಸವಕ್ಕೆ ಭೇಟಿ ನೀಡಲು ಸಾಧ್ಯವಾಗದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬ್ರಿಟನ್​ ವಕ್ತಾರ ಡೋವ್ನಿಂಗ್​​ ಸ್ಟ್ರೀಟ್​ ಹೇಳಿದ್ದಾರೆ. ಬೋರಿಸ್​ ಜಾನ್ಸನ್​​ ಜನವರಿ ಮಧ್ಯಂತರದಲ್ಲಿ ಭಾರತಕ್ಕೆ ಭೇಟಿ ನೀಡ್ತಾರೆ ಎನ್ನಲಾಗಿತ್ತು.

ಅಲ್ಲದೇ ಈ ವರ್ಷದ ಮೊದಲಾರ್ಧದಲ್ಲಿ ಭಾರತಕ್ಕೆ ಬೋರಿಸ್​ ಜಾನ್ಸನ್​ ಭೇಟಿ ನೀಡುವ ಬಗ್ಗೆ ಬ್ರಿಟನ್​ ಸರ್ಕಾರ ಅಭಯ ನೀಡಿದೆ, ಜಿ 7 ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ ಹಾಗೂ ಬೋರಿಸ್​ ಜಾನ್ಸನ್​​ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಮುಂದಿನ ವರ್ಷ ಬ್ರಿಟನ್​ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿಗೆ ಬೋರಿಸ್​ ಜಾನ್ಸನ್​ ಆಹ್ವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...