alex Certify ಫೇಸ್ ​​ಬುಕ್​ ಫ್ರೆಂಡ್​ ರಿಕ್ವೆಸ್ಟ್​ ತಿರಸ್ಕರಿಸಿದ್ದಕ್ಕೆ ಕೊಲೆ ಬೆದರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ ​​ಬುಕ್​ ಫ್ರೆಂಡ್​ ರಿಕ್ವೆಸ್ಟ್​ ತಿರಸ್ಕರಿಸಿದ್ದಕ್ಕೆ ಕೊಲೆ ಬೆದರಿಕೆ

ಫೇಸ್​ಬುಕ್ ನಲ್ಲಿ ನಿಮಗೆ ಬರುವ ಇಲ್ಲವೇ ನೀವು ಕಳುಹಿಸುವ ಫ್ರೆಂಡ್​ ರಿಕ್ವೆಸ್ಟ್​ಗಳು ನಿಮಗೆ ಎಷ್ಟು ಮುಖ್ಯ..? ಅದರಲ್ಲೂ ನಿಮ್ಮ ಸ್ನೇಹಿತರೋ ಇಲ್ಲವೇ ಕುಟುಂಬಸ್ಥರು ನಿಮ್ಮ ವಿನಂತಿಯನ್ನ ನಿರಾಕರಿಸಿದ್ರೆ ಅಬ್ಬಬ್ಬಾ ಅಂದ್ರೆ ನೀವು ಏನು ಮಾಡಬಹುದು?

ಫೇಸ್​ಬುಕ್​​ನಲ್ಲಿ ಫ್ರೆಂಡ್​ ರಿಕ್ವೆಸ್ಟ್​ಗಳನ್ನ ಒಪ್ಪಿಕೊಳ್ಳೋದು ಅಥವಾ ತಿರಸ್ಕರಿಸೋದು ತೀರಾ ಸಾಮಾನ್ಯ ವಿಚಾರವಾಗಿದೆ. ಆದರೆ ಆಘಾತಕಾರಿ ವಿಚಾರ ಏನಂದ್ರೆ ಅಮೆರಿಕದ ಉತ್ತರ ಡಕೋಟಾದ ವ್ಯಕ್ತಿಯೊಬ್ಬ ತನ್ನ ಮಾಜಿ ಬಾಸ್​ ಫೇಸ್​ಬುಕ್​ನಲ್ಲಿ ಫ್ರೆಂಡ್​ ರಿಕ್ವೆಸ್ಟ್ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ..!

29 ವರ್ಷದ ಕ್ಯಾಲೆಬ್​ ಬುರ್ಜೈಕ್ ಎಂಬಾತ ತನ್ನ ಮಾಜಿ ಬಾಸ್​​ನ್ನ ಮನೆಗೆ ತೆರಳಿದ್ದು ಮಾತ್ರವಲ್ಲದೇ ಮುಂಬಾಗಿಲನ್ನ ಕಾಲಿನಿಂದ ಒದ್ದಿದ್ದಾನೆ. 2 ದಿನಗಳವರೆಗೂ ತನ್ನ ವಿನಂತಿಯನ್ನ ಒಪ್ಪಿಕೊಳ್ಳದ ಕಾರಣ ನಿಮ್ಮನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ರೀತಿ ಮಾಡೋದಕ್ಕೂ ಮುನ್ನ ಈ ಪುಣ್ಯಾತ್ಮ ನಿಮ್ಮ ಮನೆಯ ಬಾಗಿಲನ್ನ ಒಡೆಯುತ್ತೇನೆ ಅಂತಲೂ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.

ಈ ಆಘಾತಕಾರಿ ಘಟನೆ ಬಳಿಕ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಯಾರದ್ದಾದರೂ ಫೇಸ್​ಬುಕ್​ ಫ್ರೆಂಡ್​ ರಿಕ್ವೆಸ್ಟ್​ ತಿರಸ್ಕರಿಸುವ ಮುನ್ನ ಎಚ್ಚರವಾಗಿರೋದು ಒಳಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...