ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವ ತಾಯಂದಿರು ತಮ್ಮ ಎದೆಹಾಲನ್ನು ಹೆಚ್ಚಿಸಿಕೊಳ್ಳಲು ಸರಿಯಾದ ಆಹಾರಗಳನ್ನು ಸೇವಿಸಬೇಕಾಗುತ್ತದೆ.
ಒಂದು ವೇಳೆ ಎದೆಹಾಲು ಕಡಿಮೆಯಾದರೆ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಹಾಲುಣಿಸುವ ತಾಯಂದಿರು ಎದೆ ಹಾಲು ಹೆಚ್ಚಿಸಲು ಯಾವ ಆಹಾರ ಸೇವಿಸಬಹುದು?ಯಾವ ಆಹಾರವನ್ನು ಸೇವಿಸಬಾರದು? ಎಂಬುದನ್ನು ತಿಳಿದುಕೊಳ್ಳಿ.
* ಎದೆ ಹಾಲು ಹೆಚ್ಚಿಸುವ ಆಹಾರಗಳೆಂದರೆ: ಧಾನ್ಯಗಳು(ಓಟ್ ಮೀಲ್, ಕಂದು ಅಕ್ಕಿ, ಬಾರ್ಲಿ, ಧಾನ್ಯ), ಹಸಿರು ತರಕಾರಿಗಳು (ಪಾಲಕ್, ಮೆಂತ್ಯ ಸೊಪ್ಪು, ಮುಂತಾದವು), ಸೋಂಪು, ಬೆಳ್ಳುಳ್ಳಿ, ಕಡಲೆಕಾಯಿ, ಎಳ್ಳು, ಬಾದಾಮಿ, ಅಗಸೆಬೀಜ, ಮೆಂತ್ಯ, ಹಾಲು, ಮುಂತಾದವು.
*ಎದೆಹಾಲುಣಿಸುವ ತಾಯಂದಿರು ಸೇವಿಸಬಾರದ ಆಹಾರಗಳು: ಚಹಾ, ಕಾಫಿಯಂತಹ ಪಾನೀಯಗಳು, ಆಲ್ಕೋಹಾಲ್, ಚಾಕೋಲೆಟ್, ಪುದೀನಾ, ಬೀನ್ಸ್, ಕೋಸುಗಡ್ಡೆ, ಎಲೆಕೋಸು, ಹೂಕೋಸು ಮುಂತಾದವು.