ಬೀಜಿಂಗ್: ಏಷ್ಯಾದ ಶ್ರೀಮಂತ ಉದ್ಯಮಿ ಜಾಕ್ ಮಾ ನಾಪತ್ತೆಯಾಗಿದ್ದಾರೆ. ಆಲಿಬಾಬಾ ಸಂಸ್ಥಾಪಕ ಜಾಕ್ ಮಾ ನಿಗೂಢವಾಗಿ ಕಣ್ಮರೆಯಾಗಿದ್ದು, ವಿಶ್ವದಲ್ಲೇ ತಲ್ಲಣ ಮೂಡಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಜಾಕ್ ಮಾ ಸಂಘರ್ಷ ಹೊಂದಿದ್ದು ಇದೇ ನಾಪತ್ತೆಗೆ ಕಾರಣ ಎಂದು ಹೇಳಲಾಗಿದೆ. ಜಾಕ್ ಮಾ ಇತ್ತೀಚೆಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದಾದ ನಂತರದಲ್ಲಿ ಅವರ ಕಂಪನಿಗಳಿಗೆ ಕಿರುಕುಳ ಜಾಸ್ತಿಯಾಗಿತ್ತು, ಹಲವು ನಿರ್ಬಂಧ ಹೇರಲಾಗಿತ್ತು. ಚೀನಾದ ಏಕಸ್ವಾಮ್ಯ ನಿಗ್ರಹ ಪ್ರಾಧಿಕಾರ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಇ-ಕಾಮರ್ಸ್ ಸಂಸ್ಥೆಯ ವಿರುದ್ಧ ತನಿಖೆ ಕೈಗೊಂಡಿತ್ತು.