ಗ್ರಾಹಕರಿಗೆ ರಿಲಾಯನ್ಸ್ ಜಿಯೋ ಬೇಸರದ ಸುದ್ದಿ ನೀಡಿದೆ. ಜಿಯೋದ ಟಾಕ್ ಟೈಮ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತಿದ್ದ ಉಚಿತ ಡೇಟಾ ಇನ್ಮುಂದೆ ಸಿಗುವುದಿಲ್ಲ. ಜಿಯೋದ 4ಜಿ ಡೇಟಾ ವೋಚರ್ ನಲ್ಲಿ ಧ್ವನಿ ಕರೆಯನ್ನು ಬಂದ್ ಮಾಡಿದೆ.
2020ರ ಆರಂಭದಲ್ಲಿ ಜಿಯೋ, ಟಾಕ್ ಟೈಂ ಪ್ಲಾನ್ ಜೊತೆಗೆ 100 ಜಿಬಿಯವರೆಗೆ ಉಚಿತ ಡೇಟಾ ವೋಚರ್ ಹಾಗೂ 4ಜಿ ಡೇಟಾ ವೋಚರ್ ಜೊತೆ ಬೇರೆ ನೆಟ್ವರ್ಕ್ಗೆ 1000 ಕರೆ ನಿಮಿಷವನ್ನು ಉಚಿತವಾಗಿ ನೀಡಿತ್ತು. ಆಫ್-ನೆಟ್ ಕರೆಗಳಿಗಾಗಿ 10 ರೂಪಾಯಿವರೆಗೆ ಖರ್ಚು ಮಾಡುವ ಬಳಕೆದಾರರಿಗೆ 1 ಜಿಬಿ ಡೇಟಾವನ್ನು ಜಿಯೋ ನೀಡ್ತಿತ್ತು. ಸಾವಿರ ರೂಪಾಯಿ ಟಾಕ್ ಟೈಮ್ ಯೋಜನೆಯೊಂದಿಗೆ 100 ಜಿಬಿ ಉಚಿತ ಡೇಟಾವನ್ನು ನೀಡುತ್ತಿತ್ತು.
ಜಿಯೋ 10, 20, 50, 100, 500 ಮತ್ತು 1 ಸಾವಿರ ರೂಪಾಯಿಗಳ ಟಾಕ್ ಟೈಮ್ ಯೋಜನೆಗಳನ್ನು ಹೊಂದಿದೆ. ಇದು 100 ಜಿಬಿ ವರೆಗೆ ಉಚಿತ ಡೇಟಾವನ್ನು ನೀಡುತ್ತದೆ. ಆದರೆ, ಈಗ ಈ ಯೋಜನೆಗಳಲ್ಲಿ ಉಚಿತ ಟಾಕ್ ಟೈಂ ಮಾತ್ರ ಸಿಗಲಿದೆ. 1000 ರೂಪಾಯಿಗಳ ಜಿಯೋ ಟಾಪ್-ಅಪ್ ಯೋಜನೆ ಈಗ 844.46 ರೂಪಾಯಿಗಳ ಟಾಕ್ ಟೈಮ್ ನೊಂದಿಗೆ ಸಿಗಲಿದೆ.