alex Certify ಉನ್ನತ ಸ್ಥಾನದಲ್ಲಿರುವ ಪುತ್ರಿಗೆ ಹೆಮ್ಮೆಯಿಂದ ಸೆಲ್ಯೂಟ್​​ ಮಾಡಿದ ಪೊಲೀಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉನ್ನತ ಸ್ಥಾನದಲ್ಲಿರುವ ಪುತ್ರಿಗೆ ಹೆಮ್ಮೆಯಿಂದ ಸೆಲ್ಯೂಟ್​​ ಮಾಡಿದ ಪೊಲೀಸ್..!

ಪೊಲೀಸ್​ ಇಲಾಖೆಯಲ್ಲಿ ತನಗಿಂತ ಮೇಲಿನ ಸ್ಥಾನಕ್ಕೆ ನೇಮಕವಾಗಿರುವ ಮಗಳಿಗೆ ತಂದೆ ಸೆಲ್ಯೂಟ್​ ಮಾಡುವ ಅವಿಸ್ಮರಣೀಯ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ತಿರುಪತಿಯ ಕಲ್ಯಾಣಿ ಅಣೆಕಟ್ಟು ಬಳಿ ಇರುವ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಈ ಅಪರೂಪದ ಘಟನೆ ಸಂಭವಿಸಿದೆ.

ತಿರುಪತಿಯ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಯೆಂಡಲೂರು ಶ್ಯಾಮ್​ ಸುಂದರ್​ ಭಾನುವಾರ ಸಂಜೆ ತಮ್ಮ ಮಗಳು ವೈ ಜೆಸ್ಸಿ ಪ್ರಶಾಂತಿ ಅದೇ ಪೊಲೀಸ್​​ ಡ್ಯೂಟಿ ಮೀಟ್​ನಲ್ಲಿ ಭಾಗಿಯಾಗಿರೋದನ್ನ ಗಮನಿಸಿದರು.

ಜೆಸ್ಸಿ ಪ್ರಶಾಂತಿ ತನ್ನ ತಂದೆಯನ್ನ ನೋಡುತ್ತಿದ್ದಂತೆಯೇ ಅವರನ್ನ ಮಾತನಾಡಿಸೋಕೆ ತೆರಳಿದ್ರು. ಕೂಡಲೇ ಶ್ಯಾಮ್​ ಸುಂದರ್​ ತನಗಿಂತ ಮೇಲಿನ ಸ್ಥಾನದಲ್ಲಿರುವ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್​​ ಮಾಡಿದ್ದಾರೆ. ಆದರೆ ಪ್ರಶಾಂತಿ ತಂದೆಯನ್ನ ಗೌರವಿಸಿ ಮಾತುಕತೆ ನಡೆಸಿದ್ದಾರೆ.

ನಾನು ನನ್ನ ತಂದೆಯನ್ನ ಹಾಗೂ ಪೊಲೀಸ್​ ಇಲಾಖೆ ಬಗೆಗಿನ ಅವರ ಶ್ರದ್ಧೆಯನ್ನ ಗಮನಿಸುತ್ತಲೇ ಬೆಳೆದವಳು. ತಮ್ಮ ಜವಾಬ್ದಾರಿಗೆ ನಮ್ಮ ತಂದೆ ಬದ್ಧರಾಗಿರ್ತಾರೆ. ಪೊಲೀಸ್​ ಇಲಾಖೆಗೆ ನಾನು ನೇರ್ಪಡೆಯಾಗಲು ಅವರೇ ಸ್ಪೂರ್ತಿ. ಕರ್ತವ್ಯದಲ್ಲಿದ್ದಾಗ ನನ್ನ ತಂದೆ ನಡೆದುಕೊಳ್ಳುವ ರೀತಿಯನ್ನ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಜೆಸ್ಸಿ ಪ್ರಶಾಂತಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...