ಹೈದರಾಬಾದ್: ನಮ್ಮ ಪ್ರಯೋಗದಲ್ಲಿ ದೋಷವಿದ್ದರೆ ಕಂಪನಿ ಮುಚ್ಚುತ್ತೇವೆ ಎಂದು ಭಾರತ್ ಬಯೋಟೆಕ್ ಚೇರ್ಮನ್, ಎಂಡಿ ಕೃಷ್ಣ ಎಲ್ಲಾ ಹೇಳಿದ್ದಾರೆ.
ನಮ್ಮ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದರೆ ಸಹಿಸುವುದಿಲ್ಲ. ನಾವು ಭಾರತಕ್ಕೆ ಒಳ್ಳೆಯದು ಮಾಡಬೇಕೆಂದಿದ್ದೇವೆ. ಆಕ್ಸ್ ಫರ್ಡ್ ಲಸಿಕೆಯ ಬಗ್ಗೆ ಯಾರೂ ಕೂಡ ಚೆಕಾರ ಎತ್ತಿಲ್ಲ. ಕೆಲವು ಕಂಪನಿಗಳು ಲಸಿಕೆಯನ್ನು ನೀರಿಗೆ ಹೋಲಿಸಿವೆ. ಇದು ನನಗೆ ಸಾಕಷ್ಟು ನೋವು ತಂದಿದೆ. ಯಾವುದೇ ಕಾರಣಕ್ಕೂ ನಾವು ಇದನ್ನು ಸಹಿಸುವುದಿಲ್ಲ. ನೀವ್ಯಾಕೆ ಇಂಗ್ಲೆಂಡ್ ನ ಆಕ್ಸ್ಫರ್ಡ್ ವಿವಿ ಪ್ರಯೋಗವನ್ನು ಪ್ರಶ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕೊರೊನಾದಿಂದ 120 ದಿನಗಳ ಕಾಲ ಕೊವ್ಯಾಕ್ಸಿನ್ ರಕ್ಷಣೆ ನೀಡಲಿದೆ. ಕೊವ್ಯಾಕ್ಸಿನ್ ಲಸಿಕೆಗೆ ಅಮೆರಿಕ ಸೇರಿದಂತೆ 12 ದೇಶಗಳಿಂದ ಬೇಡಿಕೆ ಬಂದಿದೆ. ಸಂಸದ ಶಶಿತರೂರ್ ಅವರ ಬಗ್ಗೆ ನಮಗೆ ಗೌರವವಿದೆ. ನಮ್ಮ ಸಂಸ್ಥೆ ಲಸಿಕೆ, ಪ್ರಯೋಗ ಪಾರದರ್ಶಕವಾಗಿದೆ. ಬೇರೆ ಲಸಿಕೆ ಪ್ರಯೋಗದ ಬಗ್ಗೆ ಯಾರು ಏಕೆ ಪ್ರಶ್ನಿಸಲ್ಲ? ನಾವು ದೇಶಕ್ಕೆ ಮೋಸ ಮಾಡಲ್ಲ. ಪ್ರತಿಯೊಬ್ಬ ಮನುಷ್ಯನ ಆರೋಗ್ಯವೂ ನಮಗೆ ಮುಖ್ಯವಾಗಿದೆ ಎಂದು ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ನಮ್ಮ ಪ್ರಯೋಗಾಲಯದಲ್ಲಿ ದೋಷವಿದ್ದರೆ ಕಂಪನಿ ಮುಚ್ಚುತ್ತೇವೆ. ನಮ್ಮ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದರೆ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.