ತೂಕ ಹೆಚ್ಚಾಗುವ ಭಯದಿಂದ ಈಗ ಎಲ್ಲರೂ ರಾತ್ರಿ ಊಟದ ಬದಲು ಚಪಾತಿ, ಸಲಾಡ್ ಅನ್ನು ಸೇವಿಸುತ್ತಾರೆ. ಆದರೆ ಎಲ್ಲರಿಗೂ ಈ ಚಪಾತಿ, ಸಲಾಡ್ ಒಗ್ಗಿ ಬರುವುದಿಲ್ಲ. ಅಂತಹವರು ಕಡಲೆ ಹಿಟ್ಟಿನಿಂದ ಮಾಡುವ ಈ ದೋಸೆಯನ್ನು ತಿನ್ನಬಹುದು. ಇದು ರುಚಿಯಾಗಿಯೂ ಇರುತ್ತದೆ.
1 ಕಪ್ ಕಡಲೆಹಿಟ್ಟನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ ಅದಕ್ಕೆ 1 ಚಿಕ್ಕ ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿಕೊಂಡು ಹಾಕಿ ನಂತರ 1 ಚಿಕ್ಕ ಟೊಮೆಟೂವನ್ನು ಕೂಡ ಕತ್ತರಿಸಿ ಹಾಕಿ. ನಂತರ ¼ ಕಪ್ ಕೊತ್ತಂಬರಿಸೊಪ್ಪು, 1 ಚಿಕ್ಕ ಹಸಿಮೆಣಸನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ.
ನಂತರ ಇದಕ್ಕೆ ½ ಟೀ ಸ್ಪೂನ್ ಶುಂಠಿ ತುರಿ, ½ ಟೀ ಸ್ಪೂನ್ ಜೀರಿಗೆ, ಚಿಟಿಕೆ ಅರಿಶಿನ, ¼ ಟೀ ಸ್ಪೂನ್ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ನೀರು ಸೇರಿಸಿ. ಇದು ದೋಸೆ ಹಿಟ್ಟಿನ ಹದಕ್ಕೆ ಇರಲಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ಎಣ್ಣೆ ಹಚ್ಚಿ ಈ ಹಿಟ್ಟನ್ನು ಹಾಕಿ ದೋಸೆ ಮಾಡಿಕೊಳ್ಳಿ.ಎರಡೂ ಕಡೆ ಚೆನ್ನಾಗಿ ಕಾದ ಬಳಿಕ ಸವಿಯಿರಿ.