ಕೊರೊನಾ ವೈರಸ್ನಿಂದ ಉಂಟಾಗಿರುವ ಕಷ್ಟಗಳು ಒಂದೆರಡಲ್ಲ. ದಕ್ಷಿಣ ಕ್ಯಾಲಿಫೋರ್ನಿಯಾದ ಹಾಟ್ಸ್ಪಾಟ್ ಏರಿಯಾಗಳಲ್ಲಂತೂ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಲು ಸ್ಮಶಾನದಲ್ಲಿ ಜಾಗ ಕೂಡ ಸಿಗುತ್ತಿಲ್ಲವಂತೆ.
ಅಮೆರಿಕದಲ್ಲಿ ಈಗಾಗಲೇ 350000 ಮಂದಿ ಕೊರೊನಾದಿಂದಾಗಿ ಸಾವಿಗೀಡಾಗಿದ್ದಾರೆ. ಈಗಾಗಿ ಶವಗಳನ್ನ ರಾಶಿ ಹಾಕಲು ನಮ್ಮಲ್ಲಿ ಸ್ಥಳದ ಕೊರತೆ ಉಂಟಾಗಿದೆ ಅಂತಾ ರಾಜ್ಯ ಅಂತ್ಯಕ್ರಿಯೆ ನಿರ್ದೇಶಕರ ಸಂಘದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಸಂಗ್ರಹಿಸಿದ ಮಾಹಿತಿ ಪ್ರಕಾರ ದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಲಾಸ್ ಎಂಜಲೀಸ್ ಕಾಂಟಿನೆಂಟಲ್ ಸ್ಮಶಾನ ಭೂಮಿ ಮುಖ್ಯಸ್ಥ, ನಾನು 40 ವರ್ಷಗಳಿಂದ ಈ ಉದ್ಯಮದಲ್ಲಿ ಇದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಇಂತಹದ್ದೊಂದು ಪರಿಸ್ಥಿತಿ ಬರುತ್ತೆ ಎಂದು ನಾನು ಊಹಿಸಿಯೇ ಇರಲಿಲ್ಲ. ನಿಮ್ಮ ಕುಟುಂಬದ ಶವವನ್ನ ನಾವು ತೆಗೆದುಕೊಳ್ಳಲು ಆಗಲ್ಲ ಎಂದು ಹೇಳೋಕೆ ಸಂಕಟವಾಗುತ್ತೆ ಎಂದು ಹೇಳಿದ್ರು.
ಈ ಸ್ಮಶಾನದಲ್ಲಿ ನಿತ್ಯ 30 ಮಂದಿಯ ಅಂತ್ಯಕ್ರಿಯೆ ಮಾಡಬಹುದಾಗಿದೆ. ಆದರೆ ಈಗ ಯಾವ ಶವಾಗಾರಕ್ಕೆ ಕರೆ ಮಾಡಿದರೂ ಶವಗಾರದಲ್ಲಿ ಜಾಗ ಇಲ್ಲ ಎನ್ನುತ್ತಾರೆ. ಮಾಲ್ಡಾನಾಡೋ ಸುತ್ತಮುತ್ತ 50 ಅಡಿ ರೆಫ್ರಿಜರೇಟರ್ ಬಾಡಿಗೆ ಪಡೆಯಲಾಗಿದೆ.
ಶವಾಗಾರ ಹಾಗೂ ಸ್ಮಶಾನ ಕೇಂದ್ರದ ಕೊರತೆಯಿಂದಾಗಿ ಶವಸಂಸ್ಕಾರ ಪ್ರಕ್ರಿಯೆ ಹಾಗೂ ಮರಣ ಪ್ರಮಾಣ ಪತ್ರ ಪಡೆಯುವ ಕೆಲಸ ನಂಪೂರ್ಣ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಕ್ಯಾಲಿಫೋರ್ನಿಯಾ ಫ್ಯೂನರಲ್ ಡೈರೆಕ್ಟರ್ಸ್ ಅಸೋಸಿಯೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಬಾಬ್ ಆರ್ಚೆಮನ್ ಹೇಳಿದ್ದಾರೆ.