ಪದೇ ಪದೇ ಪರಚುತ್ತಿದ್ದ ತನ್ನ ಸಾಕು ಬೆಕ್ಕಿನ ಉಗುರುಗಳನ್ನು ಕತ್ತರಿಸುತ್ತಿರುವ ಮಹಿಳೆಯೊಬ್ಬ ಟಿಕ್ಟಾಕ್ ವಿಡಿಯೋ ವೈರಲ್ ಆಗಿದೆ. ಶರ್ಲಿನ್ ಕಾನ್ಸುಗ್ರಾ ಹೆಸರಿನ ಈ ಮಹಿಳೆ ತನ್ನ ತುಂಟ ಬೆಕ್ಕನ್ನು ಹೆದರಿಸಿ ಉಗುರು ಕಟ್ ಮಾಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ.
ತನ್ನ ಸ್ವಾಭಾವಿಕ ಆಯುಧವಾದ ಉಗುರನ್ನು ಕಟ್ ಮಾಡುತ್ತಿರುವ ಯಜಮಾನಿಗೆ, ಹಾಗೆ ಮಾಡಬೇಡ ಎಂದು ತನ್ನದೇ ಭಾಷೆಯಲ್ಲಿ ಹೇಳುತ್ತಿರುವ ಬೆಕ್ಕು, ಆಕೆ ತನ್ನ ಮಾತನ್ನು ಕೇಳದೇ ಇದ್ದ ವೇಳೆ ಆವಾಜ್ ಹಾಕಲು ಮುಂದಾಗಿದೆ.
ಇದೇ ವೇಳೆ, ’ಹಿಸ್ಸ್’ ಎಂದು ಆಕೆಯನ್ನು ಗದರಲು ನೋಡಿದ ಬೆಕ್ಕು, ಆಕೆಯೂ ಸಹ ಹಾಗೆಯೇ ’ಹಿಸ್’ ಎಂದ ಕೂಡಲೇ ಬೆಚ್ಚಿ ಬಿದ್ದಿದೆ. “ನಾನೂ ನಿನ್ನಂತೆಯೇ ಮಾಡಬಹುದು, ಮರ್ಯಾದೆಯಿಂದ ಇರು” ಎಂದ ಮಹಿಳೆ, ತಾನೂ ಸಹ ಬೆಕ್ಕಿಗೆ ಸಿಟ್ಟು ಬಂದಾಗ ಕಚ್ಚಬಲ್ಲೆ ಎಂದು ಗದರುತ್ತಿದ್ದಾರೆ.
https://www.facebook.com/shy79/videos/4051973828187354/?t=21