ಕೇಂದ್ರ ನೌಕರರಿಗೆ ಸರ್ಕಾರ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಅಂಗವೈಕಲ್ಯ ಪರಿಹಾರ ಮುಂದುವರಿಸುವುದಾಗಿ ಸರ್ಕಾರ ಘೋಷಿಸಿದೆ. ಕರ್ತವ್ಯದ ವೇಳೆ ಅಂಗವಿಕಲರಾಗಿದ್ದರೆ ಮತ್ತು ಅಂತಹ ಅಂಗವೈಕಲ್ಯದ ನಡುವೆಯೂ ಸೇವೆ ಸಲ್ಲಿಸುತ್ತಿದ್ದರೆ ಅಂತಹ ಎಲ್ಲ ಉದ್ಯೋಗಿಗಳಿಗೆ ಅಂಗವೈಕಲ್ಯ ಪರಿಹಾರ ಮುಂದುವರಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.
ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಎಫ್ ಮುಂತಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗೆ ಇದ್ರಿಂದ ಲಾಭವಾಗಲಿದೆ. ಕರ್ತವ್ಯದ ಸಂದರ್ಭದಲ್ಲಿ ಅಂಗವೈಕಲ್ಯ ಸಾಮಾನ್ಯವಾಗಿದೆ. ಜನವರಿ 1,2004 ರಂದು ಅಥವಾ ಅದರ ನಂತ್ರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಉದ್ಯೋಗ ಪ್ರಾರಂಭಿಸಿದ ನೌಕರರಿಗೆ ಅಂಗವೈಕಲ್ಯ ಪರಿಹಾರದ ಲಾಭ ಸಿಗ್ತಿರಲಿಲ್ಲ. ಸಿಬ್ಬಂದಿ ಸಚಿವಾಲಯದ ಪಿಂಚಣಿ ಇಲಾಖೆಯ ಹೊಸ ಆದೇಶದ ಪ್ರಕಾರ, ಎನ್‌ಪಿಎಸ್ ವ್ಯಾಪ್ತಿಗೆ ಬರುವ ಯಾವುದೇ ಉದ್ಯೋಗಿಗೆ ನಿಯಮ (9) ರ ಅಡಿಯಲ್ಲಿ ಇಒಪಿ ಗೆ ಅರ್ಹರಾಗಿರುತ್ತಾರೆ.
ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮತ್ತೊಂದು ಒಳ್ಳೆಯ ಸುದ್ದಿ ಸಿಗಲಿದೆ. ಹೊಸ ವರ್ಷದಲ್ಲಿ ತುಟ್ಟಿ ಭತ್ಯೆ ಸಿಗುವ ಸಾಧ್ಯತೆಯಿದೆ. ಜನವರಿ 2021 ರಲ್ಲಿ ತುಟ್ಟಿ ಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇದರಿಂದ ದೇಶಾದ್ಯಂತ ಸುಮಾರು 1.5 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಲಾಭವಾಗಲಿದೆ.