alex Certify ಚಳಿಗಾಲದ ಈ ಸಮಸ್ಯೆಗೆ ಸೂಕ್ತ ಕೊಬ್ಬರಿ ಎಣ್ಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ಈ ಸಮಸ್ಯೆಗೆ ಸೂಕ್ತ ಕೊಬ್ಬರಿ ಎಣ್ಣೆ

ಚಳಿಗಾಲದಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮ ಮತ್ತು ಕೂದಲಿನ ಸಮಸ್ಯೆ ಕೂಡ ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ತೆಂಗಿನೆಣ್ಣೆಯನ್ನು ಬಳಸಬಹುದು.

*ಕೂದಲಿನ ಶುಷ್ಕತೆಯನ್ನು ತೆಗೆದುಹಾಕಲು ತೆಂಗಿನೆಣ್ಣೆಯನ್ನು ಬಳಸಬಹುದು. ಚಳಿಗಾಲದಲ್ಲಿ ಶುಷ್ಕ ಗಾಳಿಗೆ ಕೂದಲು ತೇವಾಂಶ ಕಳೆದುಕೊಳ್ಳುತ್ತದೆ. ಹಾಗಾಗಿ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ.

*ಚಳಿಗಾಲದಲ್ಲಿ ನೆತ್ತಿ ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಇದರಿಂದ ತಲೆಹೊಟ್ಟು ಉತ್ಪತ್ತಿಯಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ನೆತ್ತಿಗೆ ತೆಂಗಿನೆಣ್ಣೆ ಹಾಕುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

*ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ತೇವಾಂಶ ಕಳೆದುಕೊಂಡು ಒರಟಾಗಿ ಬಿರುಕು ಬಿಡುತ್ತದೆ, ಇದನ್ನು ನಿವಾರಿಸಲು ಲಿಪ್ ಗೆ ತೆಂಗಿನೆಣ್ಣೆಯಿಂದ ತಯಾರಿಸಿದ ಲಿಪ್ ಬಾಮ್ ಹಚ್ಚಿದರೆ ತುಟಿಗಳು ಮೃದುವಾಗುತ್ತವೆ.

*ಚಳಿಗಾಲದಲ್ಲಿ ಸ್ನಾನ ಮಾಡುವ ಮೊದಲು ತೆಂಗಿನೆಣ್ಣೆಯಿಂದ ದೇಹವನ್ನು ಮಸಾಜ್ ಮಾಡಿ ಬಳಿಕ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...