ಈ ಚಳಿಗಾಲದ ರಜೆಯ ದಿನಗಳಲ್ಲಿ ಸಮುದ್ರ ತೀರದಲ್ಲಿ ಕುಳಿತು, ಸೂರ್ಯನ ಬಿಸಿಲಿಗೆ ಮೈಯೊಡ್ಡಲು ಯಾರು ತಾನೆ ಬೇಡ ಎನ್ನುತ್ತಾರೆ ? ನಟಿ ರಶ್ಮಿಕಾ ಮಂದಣ್ಣ ತನ್ನ ಹುಡುಗಿಯರ ಪಡೆಯೊಂದಿಗೆ ಸಮುದ್ರ ತೀರದಲ್ಲಿ ಕುಳಿತ ಫೋಟೋ, ವಿಡಿಯೋಗಳನ್ನ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬಾಲಿವುಡ್ ಗೆ ಕಾಲಿಡಲು ತಯಾರಿ ನಡೆಸಿರುವ ರಶ್ಮಿಕಾ, ವಾರಾಂತ್ಯವನ್ನು ಗೋವಾ ಕಡಲ ತೀರದಲ್ಲಿ ಕಳೆದರು. ಹುಡುಗಿಯರೂ ಫನ್ ಅನುಭವಿಸಿದರೆ ಹೇಗಿರುತ್ತದೆ ಎಂಬುದಕ್ಕೆ ರಶ್ಮಿಕಾ ಅಂಡ್ ಗ್ಯಾಂಗ್ ನ್ಯಾಯ ಒದಗಿಸಿದೆ.
ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಪೇಜ್ ಗಳಲ್ಲಿ ಚಂದನೆಯ ಫೋಟೋಗಳನ್ನು ಅಪ್ಲೋಡ್ ಮಾಡಿರುವ ರಶ್ಮಿಕಾ, ಅರಬ್ಬಿ ಸಮುದ್ರದ ಮರಳ ದಂಡೆ ಮೇಲೆ ಕುಳಿತು, ತನ್ನೆರೆಡು ಪಾದ, ಮರಳು, ಸಮುದ್ರದ ನೀರು, ಸೂರ್ಯಾಸ್ತ ಕಾಣುವಂತೆ ಕ್ಲಿಕ್ಕಿಸಿದ ಫೋಟೋ ಕೂಡ ಇದೆ.
ಇದಲ್ಲದೆ, ತನ್ನ ಗರ್ಲ್ ಫ್ರೆಂಡ್ಸ್ ಜೊತೆಗೆ ಫನ್ ಮಾಡುತ್ತಿರುವ ವಿಡಿಯೋ ಸಹ ಗಮನ ಸೆಳೆದಿದೆ. ಇದನ್ನೆಲ್ಲ ನೋಡಿದ ಅನೇಕರಿಗೆ ತಂತಮ್ಮ ಫ್ರೆಂಡ್ಸ್, ಗೋವಾ ಬೀಚ್ ನೆನಪಾಗದೇ ಇರದು ಎನ್ನುವಂತಿದೆ.
https://www.instagram.com/p/CJixvldpPFO/?utm_source=ig_web_copy_link