ಮುಂಬೈ: ಡ್ರಗ್ಸ್ ಮಾಫಿಯಾ ಆರೋಪದ ಮೇಲೆ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸಿದ ಅರ್ಜುನ್ ರಾಮ್ ಪಾಲ್ ಜತೆ ಸಿನೆಮಾದಲ್ಲಿ ನಟಿಸಿರುವ ಕಂಗನಾ ನೆಟ್ಟಿಗರಿಂದ ಸಖತ್ ಟೀಕೆಗೆ ಒಳಗಾಗಿದ್ದಾರೆ.
ಶೀಘ್ರದಲ್ಲಿ ಕಂಗನಾ ರಣಾವತ್ ನಟನೆಯ ಧಕ್ಕಾದ್ ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ತಂಡಕ್ಕೆ ಕಂಗನಾ ಇತ್ತೀಚೆಗೆ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಅದರ ಫೋಟೋಗಳನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಡ್ರಗ್ ಮಾಫಿಯಾ ಆರೋಪ ಎದುರಿಸುತ್ತಿರುವ ಅರ್ಜುನ್ ರಾಮಪಾಲ್ ಕೂಡ ಕಂಗನಾರೊಟ್ಟಿಗೆ ಧಕ್ಕಾದ್ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಆಯೋಜಿಸಿದ್ದ ಪಾರ್ಟಿಯಲ್ಲಿ ಅರ್ಜುನ್ ಹಾಗೂ ಅವರ ಗರ್ಲ್ ಫ್ರೆಂಡ್ ಗ್ಯಾಬ್ರಿಯೇಲಾ ಕೂಡ ಪಾಲ್ಗೊಂಡಿದ್ದರು. ಕಂಗನಾ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಟೋಗಳಲ್ಲಿ ಅವರಿಬ್ಬರೂ ಇದ್ದಾರೆ. “ಡ್ರಗ್ಸ್ ಮಾಫಿಯಾ ಬಗ್ಗೆ ಅಷ್ಟೆಲ್ಲ ಮಾತನಾಡುವ ನೀವು ಅರ್ಜುನ್ ಜತೆ ನಟಿಸಿದ್ದೇಕೆ…? ಪಾರ್ಟಿಯಲಲ್ಲಿ ಪಾಲ್ಗೊಂಡಿದ್ದೇಕೆ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕ್ಲಾಸ್ ತೆಗೆದುಕೊಂಡಿದ್ದಾರೆ.
https://twitter.com/Amvaishnaa1/status/1345457074411487233?ref_src=twsrc%5Etfw%7Ctwcamp%5Etweetembed%7Ctwterm%5E1345457074411487233%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Fentertainment%2Fcelebs%2Fdrug-mafia-people-call-out-kanganas-double-standards-for-partying-with-charsi-arjun-rampal-531026.html