ಕಳೆದ ಕೆಲವು ದಿನಗಳಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಕಳೆದ ವಾರವಷ್ಟೇ ಡಬ್ಬಿ ಮೆಣಸಿನಕಾಯಿಗೆ 45,111 ರೂಪಾಯಿ ಲಭ್ಯವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದ್ದು, ಈಗ ಇದು ಕೂಡಾ ಧೂಳಿಪಟವಾಗಿದೆ.
ಗದಗ ಜಿಲ್ಲೆಯ ಬೆಟಗೇರಿ ಗ್ರಾಮದ ರೈತ ಮಲ್ಲಿಕಾರ್ಜುನ ಬಸಪ್ಪ ಕರಮಿಸ್ಟಿ ಎಂಬವರು ಟೆಂಡರ್ ಗೆ ಇಟ್ಟಿದ್ದ ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್ ಗೆ ಬರೋಬ್ಬರಿ 50,111 ರೂಪಾಯಿ ಲಭಿಸುವ ಮೂಲಕ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ.
ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದರೂ ಸಹ ಅತ್ಯುತ್ತಮ ಬೆಲೆ ಲಭಿಸಿರುವುದು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ಆದರೆ ಇದೇ ಬೆಲೆ ಮುಂದಿನ ದಿನಗಳಲ್ಲಿ ಬೆಳೆಗಾರರಿಗೆ ದೊರೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.