ಕೆಲ ಸ್ಥಳಗಳು, ಮನೆಗಳು ಭಯ ಹುಟ್ಟಿಸುವಂತಿರುತ್ತವೆ. ಅನೇಕರು ಅಲ್ಲಿಗೆ ಹೋಗಲು ಹೆದರುತ್ತಾರೆ. ಆದ್ರೆ ಭಯ ಹುಟ್ಟಿಸುವ ಮೊಬೈಲ್ ನಂಬರ್ ಕೂಡ ಇದೆ ಎಂಬುದು ನಿಮಗೆ ಗೊತ್ತಾ? ಈ ಮೊಬೈಲ್ ನಂಬರ್ ಪಡೆದಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಯಾವುದಪ್ಪಾ ಆ ಮೊಬೈಲ್ ನಂಬರ್ ಅಂದ್ರಾ? ಭಯಪಡಬೇಡಿ ಆ ನಂಬರ್ ನಮ್ಮ ದೇಶದ್ದಲ್ಲ.
ಬಲ್ಗೇರಿಯಾದಲ್ಲಿ ಈ ನಂಬರ್ ಬಳಕೆಯಲ್ಲಿತ್ತು. ಬಲ್ಗೇರಿಯಾದ ಮೊಬಿಟೆಲ್ ಕಂಪನಿಯ ಸಿಇಒ ಮೊದಲು ಇದನ್ನು ಖರೀದಿಸಿದ್ದ ಮೊಬೈಲ್ ಸಂಖ್ಯೆ 0888888888. ಇದನ್ನು ಬಳಸ್ತಿದ್ದ ವ್ಲಾಡಿಮಿರ್ ಗೆಸಾನೋವ್ 2001ರಲ್ಲಿ ಸಾವನ್ನಪ್ಪಿದ್ದ. ಕ್ಯಾನ್ಸರ್ ಬಂದು ಸಾವನ್ನಪ್ಪಿದ್ದಾನೆ ಎಂದು ಸುದ್ದಿಯಾಯ್ತು. ಆದ್ರೆ ಮೊಬೈಲ್ ನಂಬರ್ ಸಾವಿಗೆ ಕಾರಣವೆಂದು ಮಾಧ್ಯಮಗಳು ವರದಿ ಮಾಡಿದ್ವು.
ಇದಾದ ನಂತ್ರ ಈ ಸಂಖ್ಯೆಯನ್ನು ಡ್ರಗ್ಸ್ ಮಾಫಿಯಾ ಲೀಡರ್ ಖರೀದಿ ಮಾಡಿದ್ದ. 2003ರಲ್ಲಿ ಆತನನ್ನು ಹೊಡೆದು ಸಾಯಿಸಲಾಯ್ತು. ನಂತ್ರ ಪ್ರಸಿದ್ಧ ವ್ಯಾಪಾರಿಯೊಬ್ಬನ ಕೈಗೆ ಈ ನಂಬರ್ ಬಂದಿತ್ತು. ಆ ವ್ಯಾಪಾರಿ ಕೂಡ ತುಂಬಾ ದಿನ ಬದುಕಲಿಲ್ಲ. ಮೂರು ಮಂದಿ ಸಾವನ್ನಪ್ಪಿದ ಮೇಲೆ ಮೊಬೈಲ್ ಸಂಖ್ಯೆಯನ್ನು ಬ್ಯಾನ್ ಮಾಡಲಾಯ್ತು. 2005ರ ನಂತ್ರ ಈ ಮೊಬೈಲ್ ಸಂಖ್ಯೆಯನ್ನು ಯಾರಿಗೂ ನೀಡಿಲ್ಲ.