alex Certify ಶಾಕಿಂಗ್..! ಕೊರೋನಾ ಹೊತ್ತಲ್ಲೇ ಹಕ್ಕಿಜ್ವರದ ಆತಂಕ –ದಿನೇ ದಿನೇ ಸೋಂಕು ತೀವ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ಕೊರೋನಾ ಹೊತ್ತಲ್ಲೇ ಹಕ್ಕಿಜ್ವರದ ಆತಂಕ –ದಿನೇ ದಿನೇ ಸೋಂಕು ತೀವ್ರ

ಇಂದೋರ್: ಮಧ್ಯಪ್ರದೇಶದ ಇಂದೋರ್ ನ ಡಾಲಿ ಕಾಲೇಜ್ ಆವರಣದಲ್ಲಿ ಹಕ್ಕಿಜ್ವರ ಹರಡಿದ್ದು, 90 ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಡಿಸೆಂಬರ್ 29 ರಂದು ಕೆಲವು ಕಾಗೆಗಳು ಡಾಲಿ ಕಾಲೇಜ್ ಆವರಣದಲ್ಲಿ ಸತ್ತು ಬಿದ್ದಿರುವುದನ್ನು ಗಮನಿಸಿ ಪರೀಕ್ಷೆ ಕೈಗೊಳ್ಳಲಾಗಿದೆ. ಹೆಚ್1ಬಿ8 ವೈರಸ್ ಇರುವುದು ದೃಢಪಟ್ಟಿದ್ದು, ಇದನ್ನು ಹಕ್ಕಿಜ್ವರ ಎಂದು ಹೇಳಗಾಗಿದೆ.

ಮೃತಪಟ್ಟ ಕಾಗೆಗಳನ್ನು ಮಾರ್ಗಸೂಚಿಗಳ ಪ್ರಕಾರ ಹೂಳಲಾಗಿದೆ. ಮರಗಳು ಸೇರಿದಂತೆ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪಶು ವೈದ್ಯಕೀಯ ವಿಭಾಗದ ಉಪನಿರ್ದೇಶಕ ಪಿ.ಕೆ. ಶರ್ಮಾ ಹೇಳಿದ್ದಾರೆ. ಹಕ್ಕಿಜ್ವರ ಸೋಂಕು ಮಾನವರಲ್ಲಿ ಹರಡುವ ಸಾಧ್ಯತೆ ಇದೆ. ಸೋಂಕಿಗೆ ಒಳಗಾದ ಪಕ್ಷಿ 12 ಗಂಟೆಯೊಳಗೆ ಸಾಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಸತ್ತ ಕಾಗೆಗಳ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾಗೆಗಳು ನಿರಂತರವಾಗಿ ಸಾಯುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಮೃತಪಟ್ಟ ಕಾಗೆಗಳನ್ನು ಪ್ಲಾಸ್ಟಿಕ್ ಚೀನದಲ್ಲಿ ಹಾಕಿ 6 ಅಡಿ ಆಳದ ಗುಂಡಿ ತೋಡಿ ಹೂಳಲಾಗಿದೆ. ಕಳೆದ 5 ದಿನಗಳಿಂದ ಈ ಪ್ರದೇಶದಲ್ಲಿ ನಿಗಾವಹಿಸಲಾಗಿದೆ. ಹಕ್ಕಿಜ್ವರ ಹರಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಕ್ಕಿಜ್ವರದ ಆತಂಕ ಎದುರಾಗಿದ್ದು, ಇಂದೋರ್ ನಲ್ಲಿ 96 ಕಾಗೆ ಮೃತಪಟ್ಟ ಕಾರಣ ಆ ಪ್ರದೇಶದ ಜನ ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...