ಚಿತ್ರದುರ್ಗ: ಮಣ್ಣಿನ ಆರೋಗ್ಯ ಹೆಚ್ಚಿಸುವ ಮತ್ತು ಉತ್ತಮ ಇಳುವರಿಗೆ ಅನುಕೂಲವಾಗುವಂತಹ ನ್ಯಾನೋ ಗೊಬ್ಬರ ರೈತರಿಗೆ ಶೀಘ್ರವೇ ಲಭ್ಯವಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆಮಾಡಿ ಮಣ್ಣಿನ ಆರೋಗ್ಯ ಮತ್ತು ಇಳುವರಿ ಹೆಚ್ಚಿಸುವ ನ್ಯಾನೋ ಗೊಬ್ಬರ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ನಲ್ಲಿ 13000 ರೈತರಿಂದ ಪ್ರಯೋಗ ನಡೆದಿದೆ. ಶೀಘ್ರದಲ್ಲೇ ರೈತರಿಗೆ ನ್ಯಾನೋ ಗೊಬ್ಬರ ಲಭ್ಯವಾಗಲಿದೆ. ಇಸ್ಕೋ ಸಂಸ್ಥೆ ಅಭಿವೃದ್ಧಿಪಡಿಸಿದ ನ್ಯಾನೊ ಗೊಬ್ಬರ ಉತ್ತಮವಾಗಿದೆ ಎಂಬ ವರದಿ ಬಂದಿದೆ. ಉಚಿತವಾಗಿ ಗುಜರಾತ್ ನಲ್ಲಿ ರೈತರಿಗೆ ನೀಡಲಾಗಿದ್ದು, ಪ್ರಯೋಗದಲ್ಲಿ ಯಶಸ್ವಿಯಾಗಿದ್ದರಿಂದ ರೈತರಿಗೆ ಗೊಬ್ಬರ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಬೇರೆ ಗೊಬ್ಬರಕ್ಕಿಂತ ಶೇಕಡ 15 ರಷ್ಟು ಹೆಚ್ಚು ಇಳುವರಿ ನ್ಯಾನೊ ಗೊಬ್ಬರದಿಂದ ಬರುತ್ತದೆ. ಮತ್ತು ಶೇಕಡ 18ರಷ್ಟು ಕಡಿಮೆ ವೆಚ್ಚವಾಗುತ್ತದೆ. ಅಲ್ಲದೆ, ಭೂಮಿಯ ಗುಣಮಟ್ಟ ಹೆಚ್ಚುತ್ತದೆ ಎಂದು ಹೇಳಿದ್ದಾರೆ.