ನೌಕರಿ ಬೇಡ, ವ್ಯಾಪಾರ ಶುರು ಮಾಡಬೇಕು ಎನ್ನುವವರಿಗೆ ಇಲ್ಲೊಂದು ಅವಕಾಶವಿದೆ. ಅಮುಲ್ ಡೈರಿ ಉತ್ಪನ್ನ ಕಂಪನಿಯೊಂದಿಗೆ ಕೈಜೋಡಿಸಿ ಮೊದಲ ದಿನದಿಂದಲೇ ಗಳಿಕೆ ಶುರು ಮಾಡಬಹುದು. ಅಮುಲ್ ಹೊಸ ವರ್ಷದಲ್ಲಿ ಫ್ರಾಂಚೈಸಿಗಳನ್ನು ನೀಡುತ್ತಿದೆ. ಆರಂಭದಲ್ಲಿ ಸಣ್ಣ ಹೂಡಿಕೆ ಮಾಡಿ ನಂತ್ರ ಪ್ರತಿ ತಿಂಗಳು ನಿಯಮಿತ ಹೂಡಿಕೆ ಮಾಡಬಹುದು.
ಅಮುಲ್ ಜೊತೆ ವ್ಯಾಪಾರ ಶುರು ಮಾಡಲು 3ರಿಂದ 5 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ತಿಂಗಳಿಗೆ 5ರಿಂದ 10 ಲಕ್ಷದವರೆಗೆ ವಹಿವಾಟು ನಡೆಸಬಹುದು, ಆದ್ರೆ ಅದು ನಿಮ್ಮ ವ್ಯಾಪಾರ ಸ್ಥಳವನ್ನು ಆಧರಿಸಿದೆ.
ಅಮುಲ್ ಎರಡು ರೀತಿಯ ಫ್ರಾಂಚೈಸಿ ನೀಡ್ತಿದೆ. ಅಮುಲ್ ಔಟ್ಲೆಟ್, ಅಮೂಲ್ ರೈಲ್ವೆ ಪಾರ್ಲರ್ ಎರಡನೇಯದು ಅಮುಲ್ ಐಸ್ ಕ್ರೀಂ ಸ್ಕೂಪಿಂಗ್ ಪಾರ್ಲರ್. ಅಮುಲ್ ಔಟ್ಲೆಟ್ ನಲ್ಲಿ ಕಂಪನಿ ಅಮುಲ್ ಉತ್ಪನ್ನಗಳ ಎಂಆರ್ಪಿ ಮೇಲೆ ಕಮಿಷನ್ ಪಡೆಯುತ್ತದೆ. ಹಾಲಿನ ಮೇಲೆ ಶೇಕಡಾ 2.5ರಷ್ಟು, ಹಾಲಿನ ಉತ್ಪನ್ನದ ಮೇಲೆ ಶೇಕಡಾ 10ರಷ್ಟು ಹಾಗೂ ಐಸ್ ಕ್ರೀಂ ಮೇಲೆ ಶೇಕಡಾ 20ರಷ್ಟು ಕಮಿಷನ್ ಪಡೆಯುತ್ತದೆ. ಅಮುಲ್ ಔಟ್ಲೆಟ್ ಗೆ 150 ಚದರ ಅಡಿ ಜಾಗಬೇಕು. ಐಸ್ ಕ್ರೀಂ ಪಾರ್ಲರ್ ಫ್ರಾಂಚೈಸಿಗೆ 300 ಚದರ ಅಡಿ ಜಾಗ ಬೇಕಾಗುತ್ತದೆ.
ಇದ್ರಲ್ಲಿ ಆಸಕ್ತಿ ಹೊಂದಿದ್ದರೆ retail@amul.coop ಗೆ ಮೇಲ್ ಮಾಡಬೇಕು. http://amul.com/m/amul-scooping-parloursನಲ್ಲಿ ಇದ್ರ ಬಗ್ಗೆ ಎಲ್ಲ ಮಾಹಿತಿ ಲಭ್ಯವಿದೆ.