ನವದೆಹಲಿ: ಕೆಲಸದ ಸಂದರ್ಭದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾಗುವ ಮತ್ತು ಸೇವೆಯಲ್ಲಿ ಮುಂದುವರಿದ ಎಲ್ಲಾ ನೌಕರರಿಗೆ ಅಂಗವೈಕಲ್ಯ ಪರಿಹಾರ ದೊರೆಯಲಿದೆ.
ಸೇವೆ ವೇಳೆ ಅಂಗವೈಕಲ್ಯ ಉಂಟಾದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ನೌಕರರಿಗೂ ಪರಿಹಾರ ಸಿಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
2009 ರ ಆದೇಶದ ಅನ್ವಯ, 2004 ರ ಜನವರಿ 1 ರ ನಂತರ ನೇಮಕಾತಿಯಾದ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಬರುವ ನೌಕರರಿಗೆ ಅಂಗವೈಕಲ್ಯ ಪರಿಹಾರ ಸಿಗುತ್ತಿರಲಿಲ್ಲ. ಈ ಕಾರಣದಿಂದ ಕೇಂದ್ರ ಸರ್ಕಾರ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಕೆಲಸದ ವೇಳೆ ಗಾಯಗೊಂಡು ಅಂಗವೈಕಲ್ಯ ಉಂಟಾದ ಮತ್ತು ಸೇವೆಯಲ್ಲಿ ಮುಂದುವರೆಯುವ ಎಲ್ಲಾ ನೌಕರರಿಗೂ ಅಂಗಗವೈಕಲ್ಯ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.