ಟಿಂಡರ್ ಡೇಟಿಂಗ್ ಅಪ್ಲಿಕೇಶನ್ ಬಳಕೆದಾರಳಾದ ಯುವತಿಯೊಬ್ಬರು ತನ್ನೊಂದಿಗೆ ಡೇಟಿಂಗ್ ಮಾಡಲು ಬಯಸುವ ವ್ಯಕ್ತಿಗಳಿಗೆ ಅರ್ಜಿಯೊಂದನ್ನು ತುಂಬಲು ಕೋರುವ ಮೂಲಕ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಈ ಅಪ್ಲಿಕೇಶನ್ ಬಳಸುವ ಸಿಂಗಲ್ಸ್, ತಮ್ಮೊಂದಿಗೆ ಡೇಟಿಂಗ್ ಮಾಡಲು ಸೂಕ್ತವಾದ ವಿರುದ್ಧ ಲಿಂಗಿ ವ್ಯಕ್ತಿಯ ತಲಾಶೆಯಲ್ಲಿ ಇರುತ್ತಾರೆ.
ಆದರೆ ಈಕೆ ಈ ಡೇಟಿಂಗ್ ಗೇಮನ್ನು ಹೊಸ ಲೆವೆಲ್ಗೆ ಕೊಂಡೊಯ್ದಿದ್ದು, ತನ್ನ ಮೇಲೆ ಇಂಟರೆಸ್ಟ್ ಇರುವ ಮಂದಿಗೆ ತುಂಬಿಸಲು ’ಪ್ರಮುಖ ಪ್ರಶ್ನೆಗಳಿರುವ’ ಅರ್ಜಿಯೊಂದನ್ನು ಕಳುಹಿಸುತ್ತಾರೆ.
ಗೂಗಲ್ ಫಾರಂ ರೂಪದಲ್ಲಿರುವ ಈ ಅರ್ಜಿಯಲ್ಲಿರುವ ಪ್ರಶ್ನೆಗಳನ್ನು ಒಮ್ಮೆ ನೀವೇ ನೋಡಿ ಎಂಜಾಯ್ ಮಾಡಿ.