ನವದೆಹಲಿ: ಯುಪಿಐ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವುದು ಸುಳ್ಳಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯ ಸ್ಪಷ್ಟಪಡಿಸಿದೆ.
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೊದಲಾದ ಯುಪಿಐ ಮೂಲಕ ಹಣ ಪಾವತಿಸುವ ವ್ಯವಹಾರಗಳಿಗೆ ಜನವರಿ 1 ರಿಂದ ಶುಲ್ಕ ವಿಧಿಸಲಾಗುತ್ತದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳಾಗಿದೆ ಎಂದು ತಿಳಿಸಲಾಗಿದೆ. ಮೊಬೈಲ್ ವ್ಯಾಲೆಟ್ ಗಳ ಮೂಲಕ ಮಾಡುವ ಯುಪಿಐ ಸೇವೆಗಳಿಗೆ ಜನವರಿ 1 ರಿಂದ ಶುಲ್ಕ ವಿಧಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿದ್ದ ಹಿನ್ನೆಲೆಯಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಹಣ ವರ್ಗಾವಣೆಗೆ ಶುಲ್ಕ ವಿಧಿಸುವ ಸುದ್ಧಿ ಸುಳ್ಳಾಗಿದೆ ಎಂದು ಹೇಳಿದೆ.