ಪೀರ್ ರಿವೀವ್ಡ್ ಎನ್ವಿರಾನ್ಮೆಂಟ್ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಅಮೆಜಾನ್ ಕಾಡುಗಳು 2064ರ ಹೊತ್ತಿಗೆ ತನ್ನ ಹಸಿರು ಸಂಪತ್ತನ್ನ ಕಳೆದುಕೊಳ್ಳುತ್ತವೆ ಎಂದು ಊಹಿಸಲಾಗಿದೆ. ವಿಜ್ಞಾನಿ ರಾಬರ್ಟ್ ವಾಕರ್ ಈ ರೀತಿ ಅಂದಾಜಿಸಿದ್ದಾರೆ.
ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಹೇಳಿರುವ ಪ್ರಕಾರ, ಕಾಲ ಕಳೆದಂತೆ ಅಮೆಜಾನ್ ಕಾಡುಗಳು ಸವನ್ನಾ ಆಗಿ ಮಾರ್ಪಾಡಾಗಲಿವೆ. ಅರಣ್ಯ ನಾಶದಿಂದಾಗಿ 2064ರ ಹೊತ್ತಿಗೆ ಅಮೆಜಾನ್ ಕಾಡನ್ನ ಸಂಪೂರ್ಣ ಮಾಯ ಮಾಡುತ್ತೆ. ಬರಗಾಲ ಸಮಸ್ಯೆ ಅಮೆಜಾನ್ ಕಾಡನ್ನ ನುಂಗಿ ಹಾಕಲಿದೆ ಎಂದು ಅಂದಾಜಿಸಿದ್ದಾರೆ.
ಅಮೆಜಾನ್ ಕಾಡಿನಿಂದ ಕೇವಲ ಈ ಭಾಗದ ಜನತೆಗೆ ಮಾತ್ರಕ್ಕೆ ಉಪಯೋಗ ಇಲ್ಲ. ಬದಲಾಗಿ ಸಂಪೂರ್ಣ ವಿಶ್ವಕ್ಕೆ ಅಮೆಜಾನ್ ಕಾಡಿಗೆ ಅನಿವಾರ್ಯತೆ ಇದೆ. 2.3 ದಶಲಕ್ಷ ಚದರ ಮೈಲಿ ಪ್ರದೇಶದಲ್ಲಿ ವಿಶ್ವದಲ್ಲಿ ಆಮ್ಲಜನಕ ಉತ್ಪತ್ತಿ ಜಾಸ್ತಿ ಮಾಡಿ ಇಂಗಾಲದ ಚಕ್ರವನ್ನ ನಿಯಂತ್ರಣ ಮಾಡುತ್ತೆ. ಇದರಿಂದ ವಾಯುಮಾಲಿನ್ಯ ಕಡಿಮೆ ಆಗಲಿದೆ. ಆದ್ದರಿಂದ ಇದನ್ನ ಭೂಮಿಯ ಶ್ವಾಸಕೋಶ ಎಂದು ಕರೆಯಲಾಗುತ್ತೆ.