ಪಶು ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಿಭಾ ತೋಮರ್ ಬೀದಿ ನಾಯಿಗಳ ಪಾಲಿಗೆ ದೇವದೂತೆಯಾಗಿ ನಿಂತಿದ್ದಾರೆ. ಚಳಿಯಲ್ಲಿ ನಡುಗುವ ಬೀದಿ ನಾಯಿಗಳಿಗೆ ಬಳಕೆ ಮಾಡದೇ ಬಿಸಾಡಿದ ಟೈರ್ಗಳಿಂದ ಹಾಸಿಗೆಯನ್ನ ತಯಾರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿನಿ ವಿಭಾ ದೆಹಲಿ ಮೂಲದವರಾಗಿದ್ದಾರೆ.
ದೆಹಲಿಯಲ್ಲಿ ಜನವರಿ ತಿಂಗಳಲ್ಲಿ ಪ್ರತಿವರ್ಷ ತಾಪಮಾನ ಸಿಕ್ಕಾಪಟ್ಟೆ ಇಳಿಕೆಯಾಗಿರುತ್ತೆ. ಇಂತಹ ಸಮಯದಲ್ಲಿ ಬೀದಿ ನಾಯಿಗಳಿಗೆ ಚಳಿಯಿಂದ ಸಮಸ್ಯೆ ಆಗಬಾರದು ಅಂತಾ ವಿಭಾ ಈ ಮಾನವೀಯ ಕೆಲಸಕ್ಕೆ ಕೈ ಹಾಕಿದ್ದಾರೆ.
ದೆಹಲಿಯಲ್ಲಿ ಸಿಕ್ಕಾಪಟ್ಟೆ ಚಳಿ ಇರುವ ಸಮಯವಿದೆ. ಹೀಗಾಗಿ ಚಳಿಗಾಲದಲ್ಲಿ ಕಷ್ಟಪಡುತ್ತಿರುವ ಬೀದಿ ನಾಯಿಗಳನ್ನ ಕಂಡು ನನ್ನ ಮನ ಮರುಗಿತು. ಇನ್ಸ್ಟಾಗ್ರಾಂನಲ್ಲಿ ಟೈರ್ನಿಂದ ತಯಾರು ಮಾಡಿದ ಹಾಸಿಗೆಯನ್ನ ನೋಡಿ ಪ್ರೇರಣೆ ಪಡೆದ ಬಳಿಕ ನಾನು ಕೂಡ ಈ ಕೆಲಸ ಮಾಡಲು ಶುರು ಮಾಡಿದೆ ಅಂತಾ ವಿಭಾ ಹೇಳಿದ್ದಾರೆ.