ಜೀವನ ಅಂದ್ರೇನೆ ಹಾಗೆ. ಯಾವ ಸಂದರ್ಭದಲ್ಲಿ ಅದೃಷ್ಟ ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೇರಳದ ಕೊಲ್ಲಂ ಜಿಲ್ಲೆಯ ಆನಂದವಲ್ಲಿ.
ಕೆಲ ಸಮಯದ ಹಿಂದೆಯಷ್ಟೇ ಫಥನಪುರಂ ಬ್ಲಾಕ್ ಪಂಚಾಯತ್ನಲ್ಲಿ ಕಸ ಗುಡಿಸುವ ಕೆಲಸ ಮಾಡ್ತಿದ್ದ ಈಕೆ ಇದೀಗ ಅದೇ ಪಂಚಾಯತ್ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುಮಾರು 10 ವರ್ಷಗಳ ಕಾಲ ಕಚೇರಿಯಲ್ಲಿ ಗುತ್ತಿಗೆ ನೌಕರಳಾಗಿದ್ದ ಆನಂದವಲ್ಲಿ ಇದೇ ಸಭಾಂಗಣದಲ್ಲಿ ಚಹಾ ನೀಡುವುದು ಹಾಗೂ ಕಟ್ಟಡ ಶುಚಿ ಮಾಡುವ ಕೆಲಸ ಮಾಡುತ್ತಿದ್ರು.
ಕೇರಳದಲ್ಲಿ ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದಿಂದ ಸ್ಪರ್ಧಿಸಿದ್ದ ಆನಂದವಲ್ಲಿ ಬರೋಬ್ಬರಿ 654 ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು. ಎಸ್ಟಿ / ಎಸ್ಸಿ ಸಮುದಾಯಕ್ಕೆ ಸೇರಿದ ಆನಂದವಲ್ಲಿ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದಾರೆ.