ವಾಷಿಂಗ್ಟನ್: ಕೋರೋನಾ ಎರಡನೇ ಅಲೆ ಹೊಡೆತಕ್ಕೆ ಅಮೆರಿಕ ತತ್ತರಿಸಿದೆ. ಲಸಿಕೆ ನೀಡಿದ್ದರೂ, ಸೋಂಕಿ ಹರಡುವ ತೀವ್ರತೆ ಕಡಿಮೆಯಾಗಿದೆ. ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿದ್ದು, ಗುರುವಾರ ಒಂದೇ ದಿನ ಬರೋಬ್ಬರಿ 3744 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
24 ಗಂಟೆಗಳ ಅವಧಿಯಲ್ಲಿ 3744 ಸಾವು ಕಂಡಿರುವುದಾಗಿ ಜಾನ್ಸ್ ಹಾಫ್ಕೀನ್ಸ್ ವಿಶ್ವವಿದ್ಯಾಲಯದಿಂದ ಮಾಹಿತಿ ನೀಡಲಾಗಿದೆ. ಒಂದು ದಿನ ಮೊದಲು 3725 ಜನ ಸೋಂಕಿತರು ಮೃತಪಟ್ಟಿದ್ದರು. ದಾಖಲೆ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿರುವುದು ಅಮೆರಿಕ ನಿವಾಸಿಗಳಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ಬುಧವಾರ 2,29,042 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದಾಖಲಾಗಿದೆ. ದೇಶಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 1,97,45,136 ಆಗಿದ್ದು, 3,42,414 ಜನ ಸಾವನ್ನಪ್ಪಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಲ್ಲಿ ಲಸಿಕೆ ನೀಡುವುದನ್ನು ಮುಂದುವರೆಸಲಾಗಿದೆ. 1,24,09,050 ಡೋಸ್ ಲಸಿಕೆಯನ್ನು ನೀಡಲಾಗಿದೆ. ಬುಧವಾರದ ಆರಂಭದ ವೇಳೆಗೆ 27,94,588 ಜನ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.