2020ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು, ಒಳನುಸುಳುವಿಕೆ ಹಾಗೂ ನಾಗರಿಕ ಹತ್ಯೆಗಳು ಕಡಿಮೆಯಾಗಿದ್ದು ಭದ್ರತಾ ಪಡೆಗಳು 225 ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಾರ್ಷಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ 100ಕ್ಕೂ ಯಶಸ್ವಿ ಕಾರ್ಯಾಚರಣೆಗಳನ್ನ ಕೈಗೊಂಡಿದ್ದೇವೆ. 90 ಕಾರ್ಯಾಚರಣೆಗಳು ಕಾಶ್ಮೀರದಲ್ಲಿ ಹಾಗೂ 13 ಕಾರ್ಯಾಚರಣೆಗಳು ಜಮ್ಮುವಿನಲ್ಲಿ ನಡೆದವು. ಇದರಲ್ಲಿ 225 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ರು.