alex Certify ಲಡಾಖ್​ ಗಡಿಯಲ್ಲಿ ಶ್ವಾನ ದಳಕ್ಕೆ ನಾಮಕರಣ ಸಮಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಡಾಖ್​ ಗಡಿಯಲ್ಲಿ ಶ್ವಾನ ದಳಕ್ಕೆ ನಾಮಕರಣ ಸಮಾರಂಭ

ಲಡಾಖ್​ ಗಡಿಯಲ್ಲಿ ಭಾರತ ಹಾಗೂ ಚೀನಾದ ಸಂಘರ್ಷ ಮುಂದುವರಿತಾನೇ ಇದೆ. ಇಂತಹ ಚಳಿ ವಾತಾವರಣದಲ್ಲೂ ಗಡಿಯಲ್ಲಿ ನಿಂತು ದೇಶವನ್ನ ಕಾಯುತ್ತಿರುವ ಭದ್ರತಾ ಸಿಬ್ಬಂದಿಯನ್ನ ಗೌರವಿಸುವ ಸಲುವಾಗಿ ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸ್​ ಫೋರ್ಸ್​ ಹೊಸದಾಗಿ ಜನಿಸಿದ ಕೆ – 9 ನಾಯಿ ಮರಿಗಳಿಗೆ ನಾಮಕರಣ ಸಮಾರಂಭ ಏರ್ಪಡಿಸಿತ್ತು.

ಭದ್ರತಾ ಪಡೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ವಾನದಳದ ನಾಯಿಗಳಿಗೆ ವಿಶೇಷವಾದ ಹೆಸರನ್ನ ನೀಡಲಾಗಿದೆ. ಕೆ- 9 ನಾಯಿಗಳಿಗೆ ಎಲ್ಎಸಿ ಯಾವ ಯಾವ ಪ್ರದೇಶದಲ್ಲಿ ಭಾರತೀಯ ಸೇನೆ ಕಾವಲು ಕಾಯುತ್ತಿದೆಯೋ ಆ ಎಲ್ಲ ಪ್ರದೇಶಗಳ ಹೆಸರನ್ನ ಇಡಲಾಗಿದೆ.

17 ಶ್ವಾನಗಳಿಗೆ ಅನೆ -ಲಾ, ಗಾಲ್ವಾನ್, ಸಸೊಮಾ, ಚಿಪ್​-ಚಾಪ್​, ಸಸೆರ್​, ಶ್ರೀಜಪ್, ಚಾರ್ಡಿಂಗ್​, ರೆಜಂಗ್​, ಸುಲ್ತಾನ್​ ಚುಕ್ಸ್ಕು, ಇಮಿಸ್​, ರಂಗೊ, ಯುಲಾ, ಮುಖ್ಪ್ರಿ, ಚುಂಗ್​ – ಥಂಗ್​, ಖಾರದುಂಗಿ ಹಾಗೂ ಶ್ಯೋಕ್​ ಎಂದು ಹೆಸರಿಡಲಾಗಿದೆ. ಚಂಡೀಗಢದ ಭಾನು ಎಂಬಲ್ಲಿರುವ ಐಟಿಪಿಬಿಯ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಈ ನಾಮಕರಣ ಸಮಾರಂಭ ಏರ್ಪಡಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...