ಮದುವೆ ಅಂದ್ರೆ ಸಾಕು ನಮ್ಮ ಪ್ರೀತಿ ಪಾತ್ರರೆಲ್ಲ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತೆ.
ಆದರೆ ಕೆಲವರಿಗೆ ಮಾತ್ರ ಅವರ ಅಜ್ಜಿ ತಾತಂದಿರ ಆರ್ಶೀವಾದ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡುವ ಭಾಗ್ಯ ಸಿಗುತ್ತೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮದುವೆ ಸಂಭ್ರಮ ನೋಡಿದ ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ. ಅಂಬೆರ್ ರೋಸ್ ಎಂಬವರ ಮದುವೆಗೆ ಅವರ ಅಜ್ಜಿ ಬರೋಕೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಅಜ್ಜಿಯ ಎದುರು ಅಂಬೆರ್ ತಮ್ಮ ಮದುವೆ ದೃಶ್ಯವನ್ನ ಮರು ಸೃಷ್ಟಿಸಿದ್ದಾರೆ.
ಮದುವೆ ಡ್ರೆಸ್ ಧರಿಸಿ ತಯಾರಾಗಿ ನಿಂತಿದ್ದ ವಿಡಿಯೋವನ್ನ ಅಂಬೆರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾಳೆ. ವಿಡಿಯೋದಲ್ಲಿ ಮಧುವಣಗಿತ್ತಿಯಂತೆ ತಯಾರಾಗಿದ್ದ ಅಂಬೆರ್ನನ್ನ ತಂದೆ ಕೈ ಹಿಡಿದು ಕರೆದುಕೊಂಡು ಬಂದಿದ್ದು ಈ ದೃಶ್ಯ ಮನಸ್ಸಿಗೆ ಮುದ ನೀಡುವಂತಿದೆ.