ಕ್ಯಾಥೋಲಿಕ್ ಚರ್ಚ್‌ಗಳ ಪ್ರಬಲ ವಿರೋಧದ ನಡುವೆಯೂ ಗರ್ಭಪಾತವನ್ನು ಅಧಿಕೃತವಾಗಿಸುವ ಮಹತ್ವದ ಮಸೂದೆಯೊಂದನ್ನು ಅರ್ಜೆಂಟಿನಾದ ಸೆನೆಟ್ ಅಂಗೀಕರಿಸಿದೆ.
ಗರ್ಭಪಾತವನ್ನು ಕಾನೂನುಬದ್ಧ ಮಾಡಿದ ಲ್ಯಾಟಿನ್ ಅಮೆರಿಕದ ಮೊದಲ ದೇಶ ಅರ್ಜೆಂಟಿನಾವಾಗಿದೆ. ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯವಹಾರಗಳ ಮೇಲೆ ಚರ್ಚ್‌ಗಳ ಪ್ರಭಾವ ಇರುವ ದೇಶಗಳಲ್ಲಿ ಗರ್ಭಪಾತಗಳು ಬಹಳ ವಿರಳ. ಈ ಹಿಂದೆ ಇಂಥದ್ದೇ ನಡೆಯನ್ನು ಕಮ್ಯೂನಿಸ್ಟ್ ಕ್ಯೂಬಾ, ಉರುಗ್ವೆ ಹಾಗೂ ಮೆಕ್ಸಿಕೋದ ಕೆಲ ಭಾಗಗಳಲ್ಲಿ ಇಡಲಾಗಿತ್ತು.
ಸೆನೆಟ್‌ನಲ್ಲಿ ರಾತ್ರಿಯಿಡೀ ವಾದ-ವಿವಾದಗಳು ನಡೆದ ಬಳಿಕ 38-29 ರ ಪರ-ವಿರೋಧದ ಅಂತರದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಸೂದೆಗೆ ಸಹಮತ ಸಿಕ್ಕಿದೆ.
ಈ ಸುದ್ದಿ ಹರಡುತ್ತಿದ್ದಂತೆಯೇ ರಾಜಧಾನಿ ಬ್ಯೂನಸ್ ಐರಿಸ್ ನ ಬೀದಿಗಳಿಗೆ ಇಳಿದ ಮಹಿಳಾಪರ ಕಾರ್ಯಕರ್ತರು ಹಸಿರು ಧ್ವಜಗಳನ್ನು ಬೀಸಿ ಸಂಭ್ರಮಿಸಿದ್ದಾರೆ.