![](https://kannadadunia.com/wp-content/uploads/2020/12/welcome_2021_travel_plans_holidays_calendar_long_weekends_list-1024x768.jpg)
ಜನವರಿಯಲ್ಲಿ 9 ಸರ್ಕಾರಿ ರಜೆಗಳು ಇವೆ. ವಾರದ ರಜೆ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಹಬ್ಬದ ರಜೆ ಸೇರಿ 9 ರಜೆಗಳಿದ್ದು, ತಮ್ಮ ಯಾವುದೇ ವ್ಯವಹಾರ, ಊರು, ಪ್ರವಾಸಕ್ಕೆ ಹೋಗಿ ಬರುವುದಾದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳಬಹುದಾಗಿದೆ.
ಜನವರಿ 3 ಭಾನುವಾರ
ಜನವರಿ 9 ಎರಡನೇ ಶನಿವಾರ
ಜನವರಿ 10 ಭಾನುವಾರ
ಜನವರಿ 14 ಸಂಕ್ರಾಂತಿ
ಜನವರಿ 17 ಭಾನುವಾರ
ಜನವರಿ 23 ನಾಲ್ಕನೇ ಶನಿವಾರ
ಜನವರಿ 24 ಭಾನುವಾರ
ಜನವರಿ 26 ಗಣರಾಜ್ಯೋತ್ಸವ
ಜನವರಿ 31 ಭಾನುವಾರ ರಜೆ ಇರುತ್ತದೆ
ಜನವರಿ 25 ರಂದು ಒಂದು ದಿನ ರಜೆ ಹಾಕಿದರೆ ಜನವರಿ 23 ರಿಂದ 26 ರವರೆಗೆ ರಜೆ ಸೌಲಭ್ಯ ಪಡೆಯಬಹುದಾಗಿದೆ. ಇನ್ನು ಸ್ಥಳೀಯ ರಜೆಗಳು ಕೂಡ ಇರುತ್ತವೆ. ಇದರಿಂದ ಊರು, ಪ್ರವಾಸಕ್ಕೆ ಹೋಗಿ ಬರಲು ಅನುಕೂಲವಾಗುತ್ತದೆ. ಜನವರಿಯಲ್ಲಿ ಹೆಚ್ಚಿನ ಸಂಖ್ಯೆಯ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.