ಒಬ್ಬೊಬ್ಬರು ಒಂದೊಂದು ರೀತಿಯ ಡ್ರೆಸ್ಸಿಂಗ್ ಶೈಲಿಯನ್ನ ಹೊಂದಿರ್ತಾರೆ. ಆದರೆ ಪ್ರತಿಯೊಬ್ಬರ ಡ್ರೆಸ್ಸಿಂಗ್ ಶೈಲಿ ಅವರ ಆಹಾರದ ಆಯ್ಕೆ ಮೇಲೂ ಪ್ರಭಾವ ಬೀರುತ್ತೆ ಎಂಬ ಹೊಸ ಅಂಶವೊಂದು ಸಮೀಕ್ಷೆಯಿಂದ ಬಯಲಾಗಿದೆ.
ಅಧ್ಯಯನದ ಆವಿಷ್ಕಾರದ ಪ್ರಕಾರ ನಾವು ಯಾವ ರೀತಿಯ ಬಟ್ಟೆಯನ್ನ ಧರಿಸುತ್ತೇವೋ ಅದು ನೇರವಾಗಿ ನಾವು ಸೇವಿಸಲು ಆಯ್ಕೆ ಮಾಡುವ ಆಹಾರದ ಮೇಲೆ ಪರಿಣಾಮ ಬೀರುತ್ತೆ. ಫಾರ್ಮಲ್ ಬಟ್ಟೆಗಳನ್ನ ಇಷ್ಟ ಪಡುವ ವ್ಯಕ್ತಿಗಳು ಆರೋಗ್ಯಕರ ಆಹಾರವನ್ನ ಆಯ್ಕೆ ಮಾಡ್ತಾರೆ ಎಂದು ಸಮೀಕ್ಷೆ ಹೇಳಿದೆ.
ಚೀನಾ, ಆಸ್ಟ್ರೇಲಿಯಾ ಹಾಗೂ ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮೇಲೆ ಸಂಶೋಧನೆಯನ್ನ ಕೈಗೊಳ್ಳಲಾಯ್ತು. ಫಾರ್ಮಲ್ ಉಡುಪುಗಳನ್ನ ಧರಿಸಿದ ವ್ಯಕ್ತಿಗಳು ತಮ್ಮ ಗೆಳೆಯರ ಗುಂಪಿನ ಮೇಲೆ ಪರಿಣಾಮ ಬೀರಲು ಆರೋಗ್ಯಕರ ಆಹಾರವನ್ನೇ ಸೇವಿಸಲು ಇಷ್ಟಪಡ್ತಾರೆ. ಕ್ಯಾಶುವಲ್ ಉಡುಪುಗಳು ಕೊಂಚ ಆರಾಮದಾಯಕ ಧಿರಿಸಾಗಿರೋದ್ರಿಂದ ಇದನ್ನ ಧರಿಸಿದಾಗ ವ್ಯಕ್ತಿಗಳು ಕೊಂಚ ಕಡಿಮೆ ಗುಣಮಟ್ಟದ ಆಹಾರದತ್ತ ಮುಖ ಮಾಡ್ತಾರಂತೆ.
ಹೀಗಾಗಿ ಮುಂದಿನ ಬಾರಿ ಎಲ್ಲಾದರೂ ಹೊರಗೆ ಹೊರಟಾಗ ನಿಮ್ಮ ಆಹಾರದ ಆಯ್ಕೆಯ ಮೇಲೂ ಡ್ರೆಸ್ಗಳು ಪರಿಣಾಮ ಬೀರುತ್ತವಾ ಅನ್ನೋದನ್ನ ಹಾಗೆ ಒಮ್ಮೆ ಗಮನಿಸಿ ನೋಡಿ.