alex Certify BIG BREAKING: ಮಹಾರಾಷ್ಟ್ರದಲ್ಲಿ ಜನವರಿ 31 ರ ವರೆಗೆ ‌ʼಲಾಕ್‌ ಡೌನ್ʼ ನಿರ್ಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮಹಾರಾಷ್ಟ್ರದಲ್ಲಿ ಜನವರಿ 31 ರ ವರೆಗೆ ‌ʼಲಾಕ್‌ ಡೌನ್ʼ ನಿರ್ಬಂಧ

ರೂಪಾಂತರ ಕೊರೊನಾ ಪ್ರಕರಣಗಳು ಭಾರತದಲ್ಲೂ ವರದಿಯಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಜನವರಿ 31 ರ ವರೆಗೆ ಲಾಕ್‌ ಡೌನ್ ನಿರ್ಬಂಧಗಳನ್ನು‌ ಮುಂದುವರೆಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ದೇಶದಲ್ಲಿ ಈಗ ಕಾಣಿಸಿಕೊಂಡಿರುವ ಬ್ರಿ‌ಟನ್‌ ವೈರಸ್ ಶೇ.70 ರಷ್ಟು ವೇಗದಲ್ಲಿ ಹರಡುತ್ತದೆ ಎನ್ನಲಾಗಿದ್ದು, ಹೀಗಾಗಿಯೇ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರ ಇಂತದೊಂದು ನಿರ್ಧಾರ ಕೈಗೊಂಡಿದೆ. ಭಾರತ ಸರ್ಕಾರ ಈ ಮೊದಲೇ ಬ್ರಿಟನ್‌ ನಿಂದ ಆಗಮಿಸುವ ಅಥವಾ ತೆರಳುವ ವಿಮಾನಗಳ ಮೇಲೆ ನಿಷೇಧ ಹೇರಿದೆ.

ಹೊಸ ವರ್ಷ ಆಚರಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊರೊನಾ ಸೋಂಕು ಮತ್ತೆ ವ್ಯಾಪಕವಾಗಬಹುದೆಂಬ ಭೀತಿ ಮಹಾರಾಷ್ಟ್ರ ಸರ್ಕಾರವನ್ನು ಕಾಡುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲೂ ರೂಪಾಂತರ ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮತ್ತೊಮ್ಮೆ ಲಾಕ್‌ ಡೌನ್‌ ಹೇರಲಾಗುತ್ತದಾ ಎಂಬ ಆತಂಕ ಎದುರಾಗಿದೆ.

— ANI (@ANI) December 30, 2020

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...