ಉತ್ತರ ಗೋಳಾರ್ಧದಲ್ಲಿ ವಾಸಿಸುತ್ತಿರುವ ಜನರು ಕಡು ಶೀತವನ್ನ ಅನುಭವಿಸುತ್ತಿದ್ದಾರೆ. ವಿಶ್ವಾದ್ಯಂತ ಅನೇಕ ಸ್ಥಳಗಳಲ್ಲಿ ಹಿಮಪಾತ ಉಂಟಾಗ್ತಿದೆ. ಈಗಾಗಲೇ ಹಿಮಮಳೆಯ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಇದರ ನಡುವೆ ನೂಡಲ್ಸ್ ಹಾಗೂ ಮೊಟ್ಟೆ ಗುರುತ್ವಾಕರ್ಷಣೆ ಬಲ ಇಲ್ಲದೆಯೇ ನಿಂತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನ ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಟ್ವಿಟರ್ ಬಳಕೆದಾರ ಓಲೆಗ್, ನೂಡಲ್ಸ್ ಹಾಗೂ ಮೊಟ್ಟೆಯನ್ನ ಗುರುತ್ವಾಕರ್ಷಣೆ ಬಲ ಇಲ್ಲದೆಯೇ ಇರೋ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ. -45 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಫೋಟೋವನ್ನ ತೆಗೆಯಲಾಗಿದೆ. ಈ ಫೋಟೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ದಶ ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನ ಸಂಪಾದಿಸಿದೆ.