ಮ್ಯಾರಥಾನ್ ನಲ್ಲಿ ವಿಕಲಚೇತನ ವ್ಯಕ್ತಿ ವಿಶಿಷ್ಟ ಸಾಧನೆ..! 30-12-2020 6:30AM IST / No Comments / Posted In: Latest News, Sports ವಿಕಲಚೇತನ ವ್ಯಕ್ತಿಯೊಬ್ಬರು ಎಕ್ಸೊಸ್ಕೆಲೆಟನ್ ಸಹಾಯದಿಂದ ಮೊಟ್ಟ ಮೊದಲ ಬಾರಿಗೆ ಬೀಚ್ನಲ್ಲಿ ಮಕ್ಕಳೊಂದಿಗೆ ನಡೆದಾಡಿದ್ದು ಈ ಹೃದಯ ಸ್ಪರ್ಶಿ ಘಟನೆ ಕಂಡು ನೆಟ್ಟಿಗರ ಮನ ತುಂಬಿ ಬಂದಿದೆ. ಮೆದುಳಿನ ಗಡ್ಡೆ ಸಮಸ್ಯೆಯಿಂದಾಗಿ ಸೈಮನ್ ಕಿಂಡಲ್ ಸೈಡ್ಸ್ ಸೊಂಟದ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಹೀಗಾಗಿ ಮಕ್ಕಳೊಂದಿಗೆ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲಾಗದೇ ಕಷ್ಟ ಅನುಭವಿಸುತ್ತಿದ್ದರು. ಆದರೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆತ ಈಗ ನಡೆಯೋದು ಮಾತ್ರವಲ್ಲದೇ ಲಘು ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಬಹುದಾಗಿದೆ. ಈ ರೊಬೊಟಿಕ್ ವಾಕಿಂಗ್ ಸಾಧನದ ಸಹಾಯದಿಂದ ಬರೋಬ್ಬರಿ 26.2 ಮೈಲಿ ದೂರ ಕ್ರಮಿಸುವ ಮೂಲಕ ಸಾಧನೆ ಮಾಡಿದ್ದಾರೆ. ಅಲ್ಲದೇ ಈ ವಾಕಿಂಗ್ ಸಾಧನ ಬಳಸಿ ಮರಳಿನ ಮೇಲೆ ನಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Think A Year Today I Walked Over The Finish Line Of @LondonMarathon Been The First Paralysed Male To Ever Walk It,Breaking A World Record Now Got A @GWR Walked Through The Night For 27 Hours 32Mins Raising Money For @BrainTumourOrg Smashed It Team 🖤 #worldrecord #londonmarathon pic.twitter.com/LQHFhGI9hr — Simon Kindleysides (@Simonssteps) April 23, 2019