alex Certify ಹೇಗಿದೆ ಗೊತ್ತಾ 24 ಕ್ಯಾರೆಟ್ ಗೋಲ್ಡ್ ಬರ್ಗರ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ಗೊತ್ತಾ 24 ಕ್ಯಾರೆಟ್ ಗೋಲ್ಡ್ ಬರ್ಗರ್…?

ಸಾಮಾನ್ಯವಾಗಿ ವೆಜ್ ಬರ್ಗರ್, ಚಿಕನ್ ಬರ್ಗರ್ ರುಚಿ ನೋಡಿರುತ್ತೆವೆ. ಆದರೆ ಗೋಲ್ಡ್ ಬರ್ಗರ್ ಬಗ್ಗೆ ಕೇಳಿದ್ದೀರಾ? ಹೌದು. ಇಲ್ಲೊಂದು ಐಷಾರಾಮಿ ಹೋಟೆಲ್ 24 ಕ್ಯಾರೆಟ್ ಗೋಲ್ಡ್ ಬರ್ಗರ್ ತಾಯಾರಿಸುವ ಮೂಲಕ ಗಮನ ಸೆಳೆದಿದೆ.

ಅಚ್ಚರಿ ಎನಿಸಿದರೂ ಇದು ನಿಜ. ಗ್ರಾಹಕರನ್ನು ಸೆಳೆಯಲು ಹೋಟೆಲ್, ರೆಸ್ಟೊರೆಂಟ್ ಗಳು ತಿನ್ನುವ ಆಹಾರದಲ್ಲೂ ಕ್ರಿಯೆಟಿವಿಟಿಗೆ ಮಹತ್ವ ನೀಡುತ್ತಿವೆ. ಇದೀಗ ಕೊಲಂಬಿಯಾ ರೆಸ್ಟೋರೆಂಟ್ ಒಂದು 24 ಕ್ಯಾರೆಟ್ ಚಿನ್ನದ ಲೇಪನವುಳ್ಳ ಬರ್ಗರ್ ಮಾರಾಟ ಮಾಡುತ್ತಿದೆ. ಈ ಸ್ಪೆಷಲ್ ಬರ್ಗರ್ ಗೆ ಓರೋ ಮೆಕಾಯ್ ಎಂದು ಹೆಸರಿಡಲಾಗಿದೆ.

ನವೆಂಬರ್ 27ರಿಂದ ಹೋಟೆಲ್ ನ ಮೆನು ಲಿಸ್ಟ್ ನಲ್ಲಿ ಈ ಬರ್ಗರ್ ಹೆಸರು ಸೇರಿಸಲಾಗಿದೆ. ಅಷ್ಟಕ್ಕೂ ಈ ಅಪ್ಪಟ ಚಿನ್ನದ ಲೇಪನವುಳ್ಳ ಬರ್ಗರ್ ಬೆಲೆ 2,00,000 ಕೊಲಂಬಿಯನ್ ಪೌಂಡ್ಸ್. ಭಾರತೀಯ ಕರೆನ್ಸಿಯಲ್ಲಿ ಒಂದು ಬರ್ಗರ್ ಬೆಲೆ 4,191 ರೂಪಾಯಿ. ಅಂದ ಹಾಗೆ ಕೊಲಂಬಿಯಾದ ಟೋರೋ ಮೆಕಾನ್ ರೆಸ್ಟೊರೆಂಟ್ ನಲ್ಲಿ ಈ ಗೋಲ್ಡ್ ಬರ್ಗರ್ ಲಭ್ಯ. ಇದನ್ನು ಡಬಲ್ ಮೀಟ್, ಕ್ಯಾರಮೆಲೈಸ್ಡ್ ಬೇಕನ್ ಹಾಗೂ ಡಬಲ್ ಚೀಸ್ 24 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದ್ದು, ವಿಶಿಷ್ಟ ಬರ್ಗರ್ ವಿಡಿಯೋವನ್ನು ರೆಸ್ಟೊರೆಂಟ್ ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದೆ.

https://www.instagram.com/p/CI_0t4wBL3O/?utm_source=ig_web_copy_link

https://www.instagram.com/p/CITufFkl20r/?utm_source=ig_web_copy_link

https://www.instagram.com/p/CIHK7SGlJ65/?utm_source=ig_web_copy_link

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...